ಶಾಸಕ ನಾಗನಗೌಡ ಪುತ್ರ ಶರಣಗೌಡರಿಗೆ ಬಿಎಸ್ ವೈ ಆಮಿಷ : ಸಿಎಂ ಆಡಿಯೋ ರಿಲೀಸ್

ಗೃಹಕಚೇರಿ ಕೃಷ್ಣಾದಲ್ಲಿ ತುರ್ತಾಗಿ ಪತ್ರಿಕಾಗೋಷ್ಠಿ ಕರೆದ ಸಿಎಂ ಕುಮಾರಸ್ವಾಮಿ ಅವರು ಬಿ ಎಸ್ ವೈ ನಡೆಸಿದ ಆಪರೇಷನ್ ಕಮಲದಲ್ಲಿ ಶಾಸಕ ನಾಗನಗೌಡ ಪುತ್ರ ಶರಣಗೌಡರಿಗೆ ಬಿಎಸ್ ವೈ ಆಮಿಷ ಒಡ್ಡಿದ್ದಾರೆ ಎಂದು ಸಾಕ್ಷಿ ಸಹಿತವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ನಿನ್ನೆ ರಾತ್ರಿ 11.30 ಕ್ಕೆ ಶರಣಗೌಡರಿಗೆ ಕಾಲ್ ಬಂತು. ಮೊದಲ ಬಾರಿಗೆ ಕಟ್ ಮಾಡಿದರು ಶರಣಗೌಡರು. 2ನೇ ಬಾರಿ ಬಂತು ಆಗಲೂ ಕಟ್ ಮಾಡಲಾಐಇತು. 3ನೇ ಬಾರಿಗೆ ಮಾತನಾಡಿದ ಶರಣಗೌಡರೊಂದಿಗೆ ‘ಯಡಿಯೂರಪ್ಪ ಅವರು ಮಾತನಾಡುತ್ತಾರೆ ಅಂತ.. ದೇವದುರ್ಗ ಹೈವೇದಲ್ಲಿ ಇದ್ದಾರೆ ನೀವು ಮೀಟ್ ಆಗ್ಬೇಕು ಎಂದು ಹೇಳಿದರು. ನಾನು ಸಿಎಂ ಅವರಿಗೆ ಕಾನ್ಫರೆನ್ಸ್ ಹಾಕಿದೆ.  ಐಬಿಯಲ್ಲಿದ್ದಾರೆ 40 ನಿಮಿಷ ಬರಬೇಕಂತೆ ಅಂದಿದ್ದರು’ ಬಿಜೆಪಿ ಶಾಸಕರು.

ನಂತರ ನಾನು ಹೋದೆ. 12 ಸುಮಾರಿಗೆ ಹೊರಟೆ ಅಲ್ಲಿ ಮಾಜಿ ಪ್ರೆಸ್ ರಿಪೋರ್ಟ್ ಇದ್ದರು. ಹಾಸನ ಶಾಸಕ ಪ್ರೀತಂ ಗೌಡ, ದೇವದುರ್ಗ ಶಾಸಕರು ಇದ್ದರು. 40 ಕೋಟಿ ಕೊಟ್ಟು ಸ್ಪೀಕರೇನೇ ಬುಕ್ ಮಾಡಿದ್ದೇವೆ ನಾವು. ಜಡ್ಜ್ ಗಳನ್ನು ಬುಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಎಲೆಕ್ಷನ್ ಗೆ ಬೇಕಾದಷ್ಟು ಹಣ ಕೊಡಲು ಆಮಿಷ ಒಡ್ಡಿ. ಮುಂಬೈನಲ್ಲಿ ಪೇಮೆಂಟ್ ಮಾಡುವುದಾಗಿ ತಿಳಿಸಿದ್ದರು ‘ ದೇವದುರ್ಗದ ಸರ್ಕ್ಯೂಟ್ ಹೌಸ್ ನಲ್ಲಿ ಮಾತುಕತೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಆ.ಡಿಯೋ ರಿಲೀಸ್ ಮಾಡಿದ್ದಾರೆ ಸಿಎಂ

 

Leave a Reply

Your email address will not be published.