‘ಬಿ’ ಡವಿಜನ್ ಫುಟ್ಬಾಲ್ ಟೂರ್ನಿ : 2-1 ರಿಂದ ಗೋಲಿನ ಖಾತೆ ತೆರೆದ ಬೆಂಗಳೂರು ಮಾರ್ಸ್‍ ತಂಡ

ಮಂಗಲ್ ಹಾಗೂ ಮನೋಜ್ ಪಿ ಅವರು ಬಾರಿಸಿದ ಗೋಲುಗಳ ಸಹಾಯದಿಂದ ಬೆಂಗಳೂರು ಮಾರ್ಸ್‍ ತಂಡ 2-1 ರಿಂದ ಎಕ್ಸ್.ಎಲ್.ಆರ್.8 ಎಫ್ ಸಿ ತಂಡವನ್ನು ‘ಬಿ’ ಡವಿಜನ್ ಫುಟ್ಬಾಲ್ ಟೂರ್ನಿಯಲ್ಲಿ ಮಣಿಸಿತು.

ಅಶೋಕನಗರದ ಮೈದನಾದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಮಾರ್ಸ್ ತಂಡ ಮೊದಲಾವಧಿಯಲ್ಲಿ ಎರಡು ಗೋಲು ದಾಖಲಿಸಿತು. ಮಂಗಲ್ 27ನೇ ನಿಮಿಷ ಹಾಗೂ ಮನೋಜ್ 33ನೇ ನಿಮಿಷದಲ್ಲಿ ಗೋಲಿನ ನಗೆ ಬೀರಿದರು. ಎಕ್ಸ್.ಎಲ್.ಆರ್. ಪರ ಕಾರ್ತಿಕ್ 38ನೇ ನಿಮಿಷದಲ್ಲಿ ಗೋಲು ದಾಖಲಿಸಿ, ತಂಡದ ಗೋಲಿನ ಖಾತೆ ತೆರೆದರು.

ಇನ್ನೊಂದು ಪಂದ್ಯದಲ್ಲಿ ಬಿ.ಟಿ.ಎಂ ಎಫ್.ಸಿ ಹಾಗೂ ಗೋವಾನ್ಸ್‍ ಎಫ್.ಸಿ ನಡುವಣ ನಡೆದ ಪಂದ್ಯ ಗೋಲು ರಹಿತ ಡ್ರಾದಲ್ಲಿ ಅಂತ್ಯಕಂಡಿದೆ.

Leave a Reply

Your email address will not be published.