ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿ : ಪ್ರಜ್ಞೇಶ್ ಫೈನಲ್ಸ್‍ ಗೆ ಪ್ರವೇಶ

ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಪ್ರಧಾನ ಘಟ್ಟಕ್ಕೆ ಅರ್ಹತೆ ಪಡೆದಿದ್ದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಚೆನ್ನೈ ಓಪನ್, ಎ.ಟಿ.ಪಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಸ್‍ ಗೆ ಪ್ರವೇಶ ಪಡೆದಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಪ್ರಜ್ಞೇಶ್‍ 6-4, 6-2 ರಿಂದ ಅರ್ಜುನ್ ಖಡೆ ವಿರುದ್ಧ ಜಯ ಸಾಧಿಸಿದರು.

ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಶಶಿ ಕುಮಾರ್ ಮುಕುಂದ್ ಅವರು 6-3, 6-4 ರಿಂದ ಮೊಹಮ್ಮದ್ ಅವರನ್ನು ಸೋಲಿಸಿದರು.

ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಪ್ರಜ್ಞೇಶ್ ಅವರು ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್ ಅವರ ವಿರುದ್ಧ ಕಾದಾಟ ನಡೆಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com