ವಂದೇ ಮಾತರಂ ಹೇಳುವುದು ತನ್ನ ಧರ್ಮಕ್ಕೆ ವಿರುದ್ಧ ಎಂದು ಸರ್ಕಾರಿ ಶಾಲೆ ಶಿಕ್ಷಕ…

ಬಿಹಾರದ ಹಳ್ಳಿಯೊಂದರಲ್ಲಿ ಶಾಲಾ ಶಿಕ್ಷಕನೊಬ್ಬ ವಂದೇ ಮಾತರಂ ಹೇಳಲು ನಿರಾಕರಿಸಿದ ಕಾರಣಕ್ಕೆ ಗ್ರಾಮಸ್ಥರು ಚಳಿ ಬಿಡಿಸಿದ ಘಟನೆ ನಡೆದಿದೆ.

ಗಣರಾಜ್ಯೋತ್ಸವ ದಿನದಂದು ಕಟಿಯಾರ್ ಎಂಬ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣದ ನಂತರ ಅಫ್ಜಲ್ ಹುಸೇನ್ ಎಂಬ ಶಿಕ್ಷಕ ವಂದೇ ಮಾತರಂ ಹೇಳಲಾರೆ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಕೆರಳಿ ಹೋಗಿದೆ. ಈ ವೇಳೆ ಮಾತಿನ ಚಕಮಕಿ ಸಹ ನಡೆದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .

ವಂದೇ ಮಾತರಂ ಹೇಳುವುದು ತನ್ನ ಧರ್ಮಕ್ಕೆ ವಿರುದ್ಧವಾದದ್ದು ಎಂದು ಶಿಕ್ಷಕ ಹೇಳಿಕೆ ನೀಡಿದ್ದಾನೆ ಆದರೆ ಗ್ರಾಮಸ್ಥರು ಮಾತ್ರ ಮುಂದೆ ಮಾತ್ರ ಹೇಳುವಂತೆ ಪಟ್ಟು ಹಿಡಿದಿದ್ದಾರೆ.

ಇದೇ ವೇಳೆ ಈ ಪ್ರಕರಣದ ಬಗ್ಗೆ ಯಾರೂ ಸಹ ದೂರು ನೀಡಿಲ್ಲ ಎಂದು ಸ್ಥಳೀಯ ಶಿಕ್ಷಣ ಅಧಿಕಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಆದರೆ ಮಾಧ್ಯಮಗಳಲ್ಲಿ ಈ ವಿಡಿಯೋ ಸುದ್ದಿ ಬಂದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com