Sabarimala : U turn ಹೊಡೆದ ದೇವಸ್ವಂ ಮಂಡಳಿ, ಮಹಿಳೆಯರ ಪ್ರವೇಶಕ್ಕೆ ಒಪ್ಪಿಗೆ..

ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪ ದೇವರನ್ನು ನೋಡಲು ಪುರುಷರಂತೆ ಮಹಿಳೆಯರಿಗೂ ಮುಕ್ತ ಅವಕಾಶ ನೀಡಲು ಶಬರಿಮಲ ದೇವಸ್ವಂ ಮಂಡಳಿ ನಿರ್ಧರಿಸುವುದರೊಂದಿಗೆ ಮಹಿಳೆಯರ ಹೋರಾಟಕ್ಕೆ ಅರ್ಹ ಜಯ ಸಿಕ್ಕಂತಾಗಿದೆ.

ಕಳೆದ ವರ್ಷವೇ ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತಾದರೂ ಪುರುಷ ಭಕ್ತಗಣ ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿತ್ತು. ಆದಾಗ್ಯೂ ಪೊಲೀಸರ ಸರ್ಪಕಾವಲಿನಲ್ಲಿ ಕೆಲವು ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದರು.

ತನ್ನ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗಳ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆದಿರುವಾಗಲೇ ದೇವಸ್ವಂ ಮಂಡಳಿ ತನ್ನ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಶಬರಿಮಲೆ ದೇವಳಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಮರುಪರಿಶೀಲನಾ ಅರ್ಜಿಯ ಬಗೆಗಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೇರಳದಾದ್ಯಂತ ಹಲವೆಡೆ ಹಿಂಸಾಚಾರಗಳು ನಡೆದಿತ್ತು.

ಆದರೆ ಈ ನಡುವೆ ಯೂ ಟರ್ನ್ ಹೊಡೆದಿರುವ ದೇವಸ್ವಂ ಬೋರ್ಡ್ ಎಲ್ಲಾ ವಯೋಮಿತಿಯ ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಬೆಂಬಲ ವ್ಯಕ್ತಪಡಿಸಿದೆ.

Leave a Reply

Your email address will not be published.