ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಸೋಲಿಗೆ ಕಾರಣ ಹೇಳಿದ ರೋಹಿತ್ ಶರ್ಮಾ

ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ 80 ರನ್ ಗಳ ಸೋಲು ಕಂಡಿದೆ. ಸೋಲಿಗೆ ತಂಡ ಮೂರು ವಿಭಾಗಗಳಲ್ಲಿ ಎಡವಿದ್ದು ಪ್ರಮುಖ ಕಾರಣ ಎಂದು ಭಾರತದ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಚುಟುಕು ಪಂದ್ಯಗಳಲ್ಲಿ 200 ರನ್ ಹಿಂಬಾಲಿಸುವುದು ಸುಲಭವಲ್ಲ. ಈ ಗುರಿಯನ್ನು ಬೆನ್ನಟ್ಟಲು ವಿಕೆಟ್ ಕಾಯ್ಡುಕೊಳ್ಳುವ ಅವಶ್ಯಕತೆ ಇದೆ. ತಂಡ, ವಿಕೆಟ್ ನೀಡುತ್ತಾ ಪಂದ್ಯದಲ್ಲಿ ಆಘಾತ ಅನುಭವಿಸಿತು ಎಂದು ಅವರು ತಿಳಿಸಿದ್ದಾರೆ.

ಆತಿಥೇಯ ತಂಡ ಉತ್ತಮ ಪ್ರದರ್ಶನ ನೀಡಿತು. ಅಲ್ಲದೆ ಎದುರಾಳಿ ತಂಡಕ್ಕೆ ಜೊತೆಯಾಟ ವರದಾನವಾಯಿತು. ಇದರ ಬಲದಿಂದ ಕಿವೀಸ್ ಬೃಹತ್ ಮೊತ್ತ ದಾಖಲಿಸಿತು. ಮುಂದಿನ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸವಿದೆ ಎಂದು ನಾಯಕ ರೋಹಿತ್ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರು ಟಿ-20 ಪಂದ್ಯಗಳ ಎರಡನೇ ಪಂದ್ಯ ಆಕ್ಲೆಂಡ್ ನಲ್ಲಿ ಶುಕ್ರವಾರ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com