‘ನಟಸಾರ್ವಭೌಮ’ ಸಿನಿಮಾ ತೆರೆಗೆ : ನಿರೀಕ್ಷೆಗೂ ಮೀರಿ ಖುಷಿ ಕೊಟ್ಟ ಸೂಪರ್ ಸ್ಟಾರ್

‘ನಟಸಾರ್ವಭೌಮ’ ಎಂದಾಕ್ಷಣ ತಕ್ಷಣ ನೆನಪಾಗೋದು ಡಾ. ರಾಜಕುಮಾರ ಅವರು. ಸದ್ಯ ತಂದೆ ನೆನಪಿನೊಂದಿದೆ ಮಗ ಕೂಡ ‘ನಟಸಾರ್ವಭೌಮ’ ಚಿತ್ರದಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಹೌದು..ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ  ‘ನಟಸಾರ್ವಭೌಮ’  ಸಿನಿಮಾ ತೆರೆಕಂಡಿದೆ. ಸಿನಿಮಾವನ್ನು ಸ್ವಾಗತಿಸಿರುವ ಪ್ರೇಕ್ಷಕರು ಪುನೀತ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈ ಚಿತ್ರ ಟೋಟಲಿ ಡಿಫ್ರೆಂಟಾಗಿದೆ ಎಂಬ ಮಾತುಗಳು ಸಿನಿಮಾ ನೋಡಿದ ಜನರ ಅಭಿಪ್ರಾಯ. ಸಿನಿಮಾ ರಿಲೀಸ್ ಗೂ ಮುಂಚೆ ಮೂಡಿಸಿದ್ದ ಕುತೂಹಲ, ನಿರೀಕ್ಷೆ ಎಲ್ಲವನ್ನ ನಟಸಾರ್ವಭೌಮ ಯಶಸ್ವಿಯಾಗಿ ಈಡೇರಿಸಿದ್ದಾನೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಿನಿಮಾ ನೋಡಿದ ಜನರು ಟ್ವಿಟ್ಟರ್ ನಲ್ಲಿ ತಮ್ಮ ರಿವ್ಯೂ ನೀಡ್ತಾಯಿದ್ದಾರೆ. ಅದರಲ್ಲಿ ಕೆಲವು ರಿವ್ಯೂ ಇಲ್ಲಿದೆ ನೋಡಿ.

ಪುನೀತ್ ಚಿಂದಿ ಪರ್ಫಾಮೆನ್ಸ್ ನಟಸಾರ್ವಭೌಮ ಸಿನಿಮಾ ಮಧ್ಯರಾತ್ರಿಯೇ ರಿಲೀಸ್ ಆಗಿದ್ದು, ಅಪಾರ ಅಭಿಮಾನಿಗಳು ಅಪ್ಪು ಅವರ ಪರ್ಫಾಮೆನ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಯೊಬ್ಬ, ”ಬಾಕ್ಸ್ ಆಫೀಸ್ ವಿನ್ನರ್, ಅಪ್ಪು ಪರ್ಫಾಮೆನ್ಸ್ ಸೂಪರ್” ಎಂದು ಟ್ವೀಟ್ ಮಾಡಿದ್ದಾರೆ.

ಒಂದು ಸಲ ನೋಡಿದೆ, ಈಗ ಇನ್ನೊಂದು ಸಲ…. ನಟಸಾರ್ವಭೌಮ ಸಿನಿಮಾ ಒಂದು ಸಲ ನೋಡಿ ಆಯ್ತು. ಇನ್ನು ಎಷ್ಟು ಸಲ ಹೋಗ್ತೀನೋ ಗೊತ್ತಿಲ್ಲ. ಪುನೀತ್ ಡ್ಯಾನ್ಸ್, ಡೈಲಾಗ್, ಎಂಟ್ರಿ ಎಲ್ಲ ದೃಶ್ಯಗಳಲ್ಲು ನನಗೆ ಥ್ರಿಲ್ ಆಗಿತ್ತು. ಪವರ್ ಸ್ಟಾರ್ ಐ ಲವ್ ಯೂ. ನಾನು ಐದು ಸ್ಟಾರ್ ಕೊಡ್ತೀನಿ” ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಪುನೀತ್ ಅವರ ಬೆಸ್ಟ್ ಸಿನಿಮಾ ”ಪುನೀತ್ ರಾಜ್ ಕುಮಾರ್ ಜೀವನದಲ್ಲೇ ಇದು ಅತ್ಯುತ್ತಮ ಸಿನಿಮಾ. ಪುನೀತ್ ಅವರ ಆಕ್ಟಿಂಗ್ ಗೆ ಅದ್ಭುತ. ಚಿಕ್ಕಣ್ಣ ಕಾಮಿಡಿ ಮಿಂಚಿದ್ದಾರೆ. ಅಪ್ಪು ಅವರ ಡ್ಯಾನ್ಸ್ ಇನ್ನೊಂದು ಲವೆಲ್ ನಲ್ಲಿದೆ. ಅಪ್ಪು ಡ್ಯಾನ್ಸ್ ನಲ್ಲಿ ನಂ 1” ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ವಮೊಗ್ಗ ಫ್ಯಾನ್ಸ್ ”ಸೂಪರ್ ಸಾಂಗ್, ಅಲ್ಟಿಮೇಟ್ ಡ್ಯಾನ್ಸ್, ನಾನ್ ಸ್ಟಾಪ್ ಕಾಮಿಡಿ, ಫುಲ್ ಎಂಟರ್ ಟೈನ್ಮೆಂಟ್, ಅನುಪಮಾ ಮತ್ತು ಪುನೀತ್ ಕ್ಯೂಟೆಸ್ಟ್ ಜೋಡಿ, ರಚಿತಾ ಮತ್ತು ಅಪ್ಪು ಸೂಪರ್, ಇಂಟರ್ ವಲ್ ಅವರೆಗೂ ಸಿನಿಮಾ ಬ್ಯಾಂಗ್” ಎಂದು ಶಿವಮೊಗ್ಗ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಹೊಸ ಪುನೀತ್ ನೋಡಬಹುದು ”ಪಕ್ಕಾ ಸೂಪರ್ ಹಿಟ್, ಇದು ಪುನೀತ್ ಅವರ ಜೀವನದಲ್ಲಿ ಇನ್ನೊಂದು ಬ್ಲಾಕ್ ಬಸ್ಟರ್ ಸಿನಿಮಾ. ಹೋಗಿ ಸಿನಿಮಾ ನೋಡಿ ಹೊಸ ಪುನೀತ್ ರಾಜ್ ಕುಮಾರ್ ಅವರನ್ನ ನೋಡಬಹುದು”

Leave a Reply

Your email address will not be published.