Film news : ಪುನೀತ್ ರಾಜ್ ಕುಮಾರ್ ‘ನಟ ಸಾರ್ವಭೌಮ’ ಹೊಸ ದಾಖಲೆ….

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ‘ನಟ ಸಾರ್ವಭೌಮ’ ಅಬ್ಬರಿಸೋಕೆ ರೆಡಿಯಾಗಿದೆ. ಅಭಿಮಾನಿಗಳು ಒತ್ತಾಯದ ಮೆರೆಗೆ ಸಿನಿಮಾವನ್ನು ನಿರಂತರವಾಗಿ 24 ಗಂಟೆಗಳ ಪ್ರದರ್ಶನ ಮಾಡಲು ಚಿತ್ರಮಂದಿರದ ಮಾಲೀಕರು ಒಪ್ಪಿದರೆ. ಊರ್ವಶಿ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದ ಪ್ರದರ್ಶನ 24 ಗಂಟೆ ನಿರಂತರವಾಗಿ ಆಗುತ್ತಿರುವುದು.

ಸಿನಿಮಾದ ಕ್ರೇಜ್​ ಹೆಚ್ಚಾಗಿ, ಸೌತ್ ಇಂಡಿಯಾ ಸಿನಿಮಾದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯೋಕೆ ನಟ ಸಾರ್ವಭೌಮ ರೆಡಿಯಾಗಿದೆ.

ಒಂದು ಕಾಲದಲ್ಲಿ ಪರಭಾಷೆ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಬೆಂಗಳೂರಿನ ಲಾಲ್​ಬಾಗ್ ಬಳಿ ಇರೋ ಊರ್ವಶಿ ಥಿಯೇಟರ್​ನಲ್ಲಿ ನಟಸಾರ್ವಭೌಮ ಬರೋಬ್ಬರಿ 24 ಗಂಟೆಗಳ ಕಾಲ ಪ್ರದರ್ಶನ ಕಾಣಲಿದೆ.

ಈ ಚಿತ್ರ ಗುರುವಾರ ಮಧ್ಯರಾತ್ರಿ 12 ರಿಂದ ಶುಕ್ರವಾರ ಮಧ್ಯರಾತ್ರಿ 12 ವರೆಗೂ ನಿರಂತರ 24 ಗಂಟೆಗಳ ಪ್ರದರ್ಶನ ಕಾಣಲಿದೆ. ಚಿತ್ರದ ಶೋಗೆ ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು ಊರ್ವಶಿ ಚಿತ್ರಮಂದಿರದಲ್ಲಿ ‘ನಟ ಸಾರ್ವಭೌಮ’ ಅಬ್ಬರಿಸೋಕೆ ರೆಡಿಯಾಗಿದೆ.

ಈ ಮೊದಲು ರಿಲೀಸ್ ಆದಾ ಚಿತ್ರದ ಟ್ರೈಲರ್​ ಹಾಗೂ ಹಾಡು​ಗಳು ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದ್ದು. ಈಗ ’ನಟ ಸಾರ್ವಭೌಮ’ ಚಿತ್ರದ ಬಿಡುಗಡೆಯ ನಿರೀಕ್ಚೆಯಲ್ಲಿದ್ದಾರೆ.

ರಾಜ್ಯದ ಬೇರೆ ಬೇರೆ ಕಡೆ ಕೂಡ ಸಿನಿಮಾ ಪ್ರದರ್ಶನ ಮಧ್ಯರಾತ್ರಿಯೇ ಶುರು ಆಗಲಿದೆ. ಈಗಾಗಲೇ, ಸಿನಿಮಾದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

Leave a Reply

Your email address will not be published.