ಎಡಗೈ ಸ್ಪಿನ್ ಬೌಲರ್ ಆದಿತ್ಯ ಸರ್ವಟೆ : ಸೌರಾಷ್ಟ್ರದ ಐದು ವಿಕೆಟ್, 148 ರನ್ ಗಳು ಅವಶ್ಯಕ

ಎಡಗೈ ಸ್ಪಿನ್ ಬೌಲರ್ ಆದಿತ್ಯ ಸರ್ವಟೆ (13 ರನ್ ಗೆ 3 ವಿಕೆಟ್) ಉತ್ತಮ ಬೌಲಿಂಗ್ ಪ್ರದರ್ಶನದಿಂದ ವಿದರ್ಭ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸೌರಾಷ್ಟ್ರದ ಐದು ವಿಕೆಟ್ ಗಳನ್ನು 148 ರನ್ ಗಳ ಅಂತರದಲ್ಲಿ ಕಬಳಿಸಬೇಕಿದೆ.

ವಿದರ್ಭ 2 ವಿಕೆಟ್ ನಷ್ಟಕ್ಕೆ 55 ರನ್ ಗಳಿಂದ ದ್ವಿತೀಯ ಇನ್ನಿಂಗ್ಸ್ ಆರಂಭಿಸಿ, 200 ರನ್ ಗಳಿಗೆ ಆಲ್ ಔಟ್ ಆಯಿತು. 206 ರನ್ ಗುರಿಯನ್ನು ಹಿಂಬಾಲಿಸಿದ ಸೌರಾಷ್ಟ್ರ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 58 ರನ್ ಕಲೆ ಹಾಕಿದೆ.

ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರದ ಆರಂಭಿಕ ಹಾರ್ವಿಕ್ ದೇಸಾಯಿ (8), ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಸ್ನೇಲ್ ಪಟೇಲ್ (12) ವಿದರ್ಭ ಬೌಲಿಂಗ್ ಎದುರು ನೆಲಕ್ಕೂರುವಲ್ಲಿ ವಿಫಲರಾದರು. ಸ್ಟಾರ್ ಟೆಸ್ಟ್‍ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಶೇಲ್ಡನ್ ಜಾಕ್ಸನ್, ಅರ್ಪಿತ್ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಮಧ್ಯಮ ಕ್ರಮಾಂಕದ ವಿಶ್ವರಾಜ್ ಸಿನ್ಹಾ ಜಡೇಜಾ (23) ಹಾಗೂ ಕಮ್ಲೇಶ್ ಮಕ್ವನ್ (2) ಗುರುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿದರ್ಭ ತಂಡದ ಗಣೇಶ್ ಸತೀಶ್ (35), ವಾಸೀಮ್ ಜಾಫರ್ (11), ಮೋಹಿತ್ ಕಾಳೆ (38), ತಂಡದ ಮೊತ್ತವನ್ನು ಹಿಗ್ಗಿಸಿದರು. ಕೆಳ ಕ್ರಮಾಂಕದಲ್ಲಿ ಆದಿತ್ಯ ಸರ್ವಟೆ 113 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 49 ರನ್ ಬಾರಿಸಿ ಮಿಂಚಿದರು.

Leave a Reply

Your email address will not be published.

Social Media Auto Publish Powered By : XYZScripts.com