ಇಂಡಿಯನ್ ಸೂಪರ್ ಲೀಗ್ ಪಂದ್ಯ : 2-2 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ

ಎರಡನೇ ಅವಧಿಯಲ್ಲಿ ಬೆಂಗಳೂರು ಫುಟ್ಬಾಲ್ ತಂಡ ನೀಡಿದ ಅದ್ಭುತ ಪ್ರದರ್ಶನದ ಬಲದಿಂದ ಇಲ್ಲಿ ನಡೆದಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ 2-2 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ ಸಾಧಿಸಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ ಸಿ ಪರ ಉದಾಂತ್ ಸಿಂಗ್ (69ನೇ ನಿಮಿಷ) ಹಾಗೂ ಸುನಿಲ್ ಛೆಟ್ರಿ (85ನೇ ನಿಮಿಷ) ಗೋಲು  ಬಾರಿಸಿದರು. ಕೇರಳ ಬ್ಲಾಸ್ಟರ್ಸ್ ಪರ ಸ್ಲಾವಿಸಾ ಸ್ಟೊಜಾನೊವಿಕ್ (16ನೇ ನಿಮಿಷ) ಹಾಗೂ ಕರೇಜ್ ಪೆಕುಸನ್ (40ನೇ ನಿಮಿಷ) ಗೋಲು ದಾಖಲಿಸಿದರು.

ಮೊದಲಾವಧಿಯ ಪಂದ್ಯದಲ್ಲಿ ಉಭಯ ತಂಡಗಳು ಗೋಲು ಬಾರಿಸುವ ಇರಾದೆಯಿಂದ ಅಂಗಳ ಪ್ರವೇಶಿಸಿದವು. ಆರಂಭದಲ್ಲಿ ಕೇರಳ ತಂಡ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿತು. 16ನೇ ನಿಮಿಷದಲ್ಲಿ ಪೆನಾಲ್ಟಿ ಶೂಟ್‌ ನಲ್ಲಿ ಸ್ಲಾವಿಸಾ ಸ್ಟೊಜಾನೊವಿಕ್ ಗೋಲು ಬಾರಿಸುವಲ್ಲಿ ಸಫಲರಾದರು.

40ನೇ ನಿಮಿಷದಲ್ಲಿ  ಕರೇಜ್ ಪೆಕಸನ್ ಗೋಲು ಗಳಿಸಿ ಗೋಲಿನ ಅಂತರವನ್ನು ಹಿಗ್ಗಿಸಿದರು. ಈ ಅವಧಿಯಲ್ಲಿ ಗೋಲು ಬಾರಿಸುವ ಬಿ.ಎಫ್.ಸಿ ಆಸೆ ಫಲಿಸಲಿಲ್ಲ.

ಎರಡನೇ ಅವಧಿಯಲ್ಲಿ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿತು. ಅನುಭವಿ ಉದಾಂತ್ ಸಿಂಗ್ 69ನೇ ನಿಮಿಷದಲ್ಲಿ ಗೋಲು ದಾಖಲಸಿದರು. ಗೋಲು ಬರ ಅನುಭವಿಸುತ್ತಿದ್ದ ಸುನಿಲ್ ಛೆಟ್ರಿ 85ನೇ ನಿಮಿಷದಲ್ಲಿ ಗೋಲು ಬಾರಿಸಿ ಅಬ್ಬರಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com