ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್, ಕರಣ್ ಜೋಹರ್ ವಿರುದ್ಧ ದೂರು

ಮಹಿಳೆಯರ ವಿರುದ್ಧ ಅಸಭ್ಯ ಹೇಳಿಕೆ ನೀಡಿ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್ ಸೇರಿದಂತೆ ಚಿತ್ರ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ದೂರು ದಾಖಲಿಸಲಾಗಿದೆ.

ಸ್ಥಳೀಯ ವಕೀಲ ಡಿ. ಮೇಘವಾಲ್ ಅವರು ಜಿಲ್ಲಾ ಪೊಲೀಸ್ ಆಯುಕ್ತರಿಗೆ, ಆಟಗಾರರು ಹಾಗೂ ಚಿತ್ರ ನಿರ್ಮಾಪಕರ ವಿರುದ್ಧ ದೂರು ದಾಖಲಿಸಲು ಮನವಿ ಸಲ್ಲಿಸಿದ್ದಾರೆ. ಇವರ ಮನವಿಯನ್ನು ವರಿಷ್ಠಾಧಿಕಾರಿ  ಲೂಣಿ ಪೊಲೀಸ್ ಠಾಣೆಗೆ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಬಾಗವಹಿಸಿದ್ದರು. ಈ ವೇಳೆ ಅವರು ಮಹಿಳೆ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದರು. ಬಿಸಿಸಿಐ ಈ ಇಬ್ಬರ ಮೇಲೂ ಅಮಾನತು ಶಿಕ್ಷೆ ವಿಧಿಸಿ, ನಂತರ ತೆರವು ಗೊಳಿಸಿತ್ತು.

ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಸೇರಿದ್ದು, ರಾಹುಲ್ ಭಾರತ ‘ಎ’ ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com