ಕಾಂಗ್ರೆಸ್ ಕೊನೇ ಅಸ್ತ್ರ ಪ್ರಿಯಾಂಕಾ ಗಾಂಧಿ ಬಂಡವಾಳವೂ ಬಯಲಾಗಲಿದೆ – ಹೆಗಡೆ…

ಕಾಂಗ್ರೆಸ್ ಬತ್ತಳಿಕೆಯಲ್ಲಿ ಇರೋ ಕೊನೇ ಅಸ್ತ್ರ ಪ್ರಿಯಾಂಕಾ ಗಾಂಧಿಯಾಗಿದ್ದು, ಅವಳ ಬಂಡವಾಳವೂ ಇನ್ನೇನು ಬಯಲಾಗಲಿದೆ.
ಪ್ರಿಯಾಂಕಾ ಗಾಂಧಿಯೊಂದಿಗೆ ಕಾಂಗ್ರೆಸ್‌ನ ಮಹಾಭಾರತ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಟೀಕಿಸಿದ್ದಾರೆ.

ಪ್ರೀಯಾಂಕಾ ಗಾಂಧಿ, ರಾಹುಲ್ ಗಾಂಧಿಗಿಂತ ಪ್ರಭಾವಿಯಂತೆ, ಇಂದಿರಾಗಾಂಧಿ ಅವತಾರವಂತೆ ಎಂದು ವರ್ಣಿಸಲಾಗ್ತಿದೆ. ಆದರೆ ಅವರ ಬಂಡಾಳವೂ ಸದ್ಯವೇ ತಿಳಿಯಲಿದೆ. ಕಾಂಗ್ರೆಸ್ ನೆಹರೂ ಕುಟುಂಬದ ಹೊರತಾಗಿ ಯಾರನ್ನೂ ಒಪ್ಪದು ಎಂದರು.

ದೇಶದ ಎಲ್ಲಾ ವ್ಯವಸ್ಥೆಯಲ್ಲಿ ಅರ್ಬನ್ ನಕ್ಸಲ್ ತುಂಬಿಕೊಂಡಿದ್ದಾರೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲ ಕಡೆ ಕಾಂಗ್ರೆಸ್ ರಾಷ್ಟ್ರ ದ್ರೊಹಿಗಳನ್ನು ಇಟ್ಟಿದೆ. ಮಾಧ್ಯಮದಲ್ಲೂ ಅರ್ಬನ್ ನಕ್ಸಲ್ ಇದ್ದು, ಅವರೇ ಎಲ್ಲೂ ಇಲ್ಲದ ನನ್ನನ್ನು ಜನಪ್ರೀಯತೆಗೆ ತಂದವರು. ವಿವಾದಿತ ಹೇಳಿಕೆ ಎಂದು ಪ್ರಚಾರ ನೀಡಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಎಂದು ವ್ಯಂಗ್ಯವಾಡಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಪರಿಸ್ಥಿತಿ ಬದಲಾಗಲಿದ್ದು, ಬಿಜೆಪಿಯ ಐತಿಹಾಸಿಕ ಗೆಲುವಿನತ್ತ ಭಾರತ ಹೋಗುತ್ತಿದೆ. ದೇಶ ಮೊಟ್ಟ ಮೊದಲ ಬಾರಿಗೆ ಕಂಡಿರುವ ದೇಶದ ಸರ್ಕಾರ ಮೋದಿ ಸರ್ಕಾರವಾಗಿದೆ. 1 ವರ್ಷದಲ್ಲಿ 9.5 ಕೋಟಿ ಜನರಿಗೆ ಉಚಿತವಾಗಿ ಸಿಲಿಂಡರ್ ವಿತರಣೆ ಮಾಡಲಾಗಿದೆ. ಆದರೆ ಕಳೆದ 70 ವರ್ಷದಲ್ಲಿ 6 ಕೋಟಿ ಸಿಲಿಂಡರ್ ನೀಡಲಾಗಿದೆ. ಇದು ಮೋದಿ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಹಾಗೂ ಇತರೆ ಸರ್ಕಾರಕ್ಕೆ ಇರುವ ವ್ಯತ್ಯಾಸವಾಗಿದೆ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com