Film news : Darshan ಚಿತ್ರ ‘ಯಜಮಾನ’ n ಟೈಟಲ್ ಸಾಂಗ್ ಬಿಡುಗಡೆ….

‘ಯಜಮಾನ’ ಸಿನಿಮಾದ ನಾಲ್ಕನೇ ಹಾಡು ಬಿಡುಗಡೆಯಾಗಿದೆ. ಅದು ಟೈಟಲ್ ಸಾಂಗ್ ಅನ್ನೋದೇ ವಿಶೇಷ. ಮತ್ತೆ ಡಿ ಬಾಸ್ ಅಬ್ಬರ ಯೂಟ್ಯೂಬ್‌ನಲ್ಲಿ ಜೋರಾಗಿದೆ. ಹಾಡು ಬಿಡುಗಡೆಯಾದ ಕೆಲವೇ ನಿಮಿಷದಲ್ಲಿ 4 ಲಕ್ಷ ಹಿಟ್ಸ್ ದಾಟಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಹಾಡುಗಳು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸೆನ್ಸೇಷನ್‌ ಕ್ರಿಯೇಟ್ ಮಾಡುತ್ತಿದೆ.

ಇಂದು ಸಂಜೆ 5 ಗಂಟೆಗೆ ಯಜಮಾನ ಟೈಟಲ್ ಸಾಂಗ್‌ ಯೂ ಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಲಾಗಿದೆ.

ನಾಯಕನ ಗುಣಗಳನ್ನು ಗುಣಗಾನ ಮಾಡುವ ಸಾಲುಗಳನ್ನು ‘ನಿಂತ ನೋಡು ಯಜಮಾನ’ ಎಂಬ ಸಂತೋಷ್ ಆನಂದ್ ರಾಮ್ ಬರೆದಿರುವ ಈ ಹಾಡು ದರ್ಶನ್ ಅಭಿಮಾನಿಗಳ ಮನಸ್ಸಿಗೆ ತಾಕಿದೆ. ಈ ಹಾಡಿಗೆ ಹರಿಕೃಷ್ಣ ಸಂಗೀತ ಹಾಗೂ ವಿಜಯ ಪ್ರಕಾಶ್ ಧ್ವನಿ ನೀಡಿದ್ದಾರೆ.

ಯೂಟ್ಯೂಬ್‌ನಲ್ಲಿ ಈಗಾಗಲೇ ‘ಯಜಮಾನ’ ಚಿತ್ರದ 3 ಹಾಡುಗಳೂ ಸೂಪರ್‌ ಡೂಪರ್‌ ಹಿಟ್ ಆಗಿದ್ದು, ಈ ಹಾಡು ಕೂಡ ಟ್ರೆಂಡಿಂಗ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಮತ್ತಷ್ಟು ದಾಖಲೆ ಮಾಡುವ ನಿರೀಕ್ಷೆ ಹುಟ್ಟಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com