ಆತ್ಮಹತ್ಯೆ ಮಾಡಿಕೊಂಡ ಟಾಲಿವುಡ್ ನಟಿ ನಾಗ ಝಾನ್ಸಿ, ಕಾರಣ ನಿಗೂಢ

ಟಾಲಿವುಡ್ ನಟಿ ನಾಗ ಝಾನ್ಸಿ ಎಂಬುವವರು ತಮ್ಮ ಅಪಾರ್ಟ್ಮೆಂತಿನಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

21 ವರ್ಷ ವಯಸ್ಸಿನ ನಾಗ ಝಾನ್ಸಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ವ್ಯಕ್ತಿಯೊಬ್ಬರೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಝಾನ್ಸಿ ಅವರ ಮೊಬೈಲ್ ಫೋನ್ ಮತ್ತು ಈಮೇಲ್ ಮಾಹಿತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದ ಪವಿತ್ರ ಬಂಧನ ಎಂಬ ಧಾರಾವಾಹಿ ಯಲ್ಲಿ ನಟಿಸುತ್ತಿದ್ದ ಝಾನ್ಸಿ, ಕಳೆದ ಆರು ತಿಂಗಳಿನಿಂದ ವ್ಯಕ್ತಿಯೊಬ್ಬರೊಂದಿಗೆ ಸಂಪರ್ಕದಲ್ಲಿದ್ದರು. ಇದು ಪ್ರೇಮ ಪ್ರಕರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು, ಮನೆಯ ಬಾಗಿಲು ಮುರಿದು ನೋಡಿದರೆ ಝಾನ್ಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಅವರ ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.

Leave a Reply

Your email address will not be published.