ರಣಜಿ ಟೂರ್ನಿ ಫೈನಲ್ ಪಂದ್ಯ : ವಿದರ್ಭ ವಿರುದ್ಧ 5 ರನ್ ಗಳ ಇನ್ನಿಂಗ್ಸ್ ಹಿನ್ನಡೆ

ಆರಂಭಿಕ ಸ್ನೇಲ್ ಪಟೇಲ್ ಶತಕ ಹಾಗೂ ನಾಯಕ ಜಯದೇವ್ ಉನಾದ್ಕಟ್ (46) ಅವರು ಉತ್ತಮ ಆಟದ ಹೊರತಾಗಿಯೂ, ಸೌರಾಷ್ಟ್ರ ತಂಡ ಇಲ್ಲಿ ನಡೆದಿರುವ ರಣಜಿ ಟೂರ್ನಿ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ 5 ರನ್ ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ.

5 ವಿಕೆಟ್ ಗೆ 158 ರನ್ ಗಳಿಂದ ಮೂರನೇ ದಿನದಾಟ ಮುಂದುವರೆಸಿದ ಸೌರಾಷ್ಟ್ರ ತಂಡ, 307 ರನ್ ಗಳಿಗೆ ಆಲೌಟ್ ಆಯಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭ ತಂಡ 2 ವಿಕೆಟ್ ನಷ್ಟಕ್ಕೆ 55 ರನ್ ಕಲೆ ಹಾಕಿದೆ. ಅನುಭವಿ ಗಣೇಶ್ ಸತೀಶ್ ಹಾಗೂ ವಾಸೀಮ್ ಜಾಫರ್ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸ್ನೆಲ್‌ ಪಟೇಲ್‌, ಆಪತ್ತಿನಲ್ಲಿದ್ದ ತಂಡಕ್ಕೆ ಆಧಾರವಾದರು. ಇವರು ಎದುರಿಸಿದ 209 ಎಸೆತಗಳಲ್ಲಿ 15 ಬೌಂಡರಿ ಸೇರಿದಂತೆ 102 ರನ್‌ ಗಳಿಸಿ ಶತಕ ಸಿಡಿಸಿದರು.

ಪ್ರೇರಕ್‌ ಮಂಕಡ್‌ ( 21 ರನ್), ಕಮಲೇಶ್ ಮಕ್ವಾನ ( 27 ರನ್‌), ಧರ್ಮೇಂದ್ರ ಸಿನ್ಹ್ ಜಡೇಜಾ ( 23 ) ಅವರ ಅಲ್ಪ ಕಾಣಿಕೆ ತಂಡಕ್ಕೆ ಆಸರೆಯಾಯಿತು. ಚೇತನ್ ಸಕಾರಿಯಾ(28) ಹಾಗೂ ನಾಯಕ ಜಯದೇವ್ 10ನೇ ವಿಕೆಟ್ ಗೆ 60 ರನ್ ಜೊತೆಯಾಟದ ಕಾಣಿಕೆ ನೀಡಿದರು. ಜಯದೇವ್‌ ಉನದ್ಕತ್‌ 46 ರನ್‌ಬಾರಿಸಿ ಔಟ್ ಆದರು.

5 ರನ್ ಗಳ ಮುನ್ನಡೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭ ತಂಡದ ನಾಯಕ ಫಯಾಜ್ ಫಜಲ್ ಹಾಗೂ ಎಸ್.ಆರ್. ರಾಮಸ್ವಾಮಿ ತಂಡಕ್ಕೆ ಉತ್ತಮ ಆರಂಭ ನೀಡಲಿಲ್ಲ.

ವಿದರ್ಭ ಬುಧವಾರದ ಪಂದ್ಯದಲ್ಲಿ ಸಮಯೋಚಿತ ಆಟವಾಡಿ ದೊಡ್ಡ ಮೊತ್ತ ಕಲೆ ಹಾಕುವ ಯೋಜನೆಯನ್ನು ಹೆಣೆದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್

ವಿದರ್ಭ ಮೊದಲ ಇನ್ನಿಂಗ್ಸ್ 312, ದ್ವಿತೀಯ ಇನ್ನಿಂಗ್ಸ್ 2 ವಿಕೆಟ್ ಗೆ 55

ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 307

Leave a Reply

Your email address will not be published.

Social Media Auto Publish Powered By : XYZScripts.com