ಮಹಾತ್ಮಾ ಗಾಂಧೀಜಿಯವರ ಪ್ರತಿಕೃತಿಗೆ ಗುಂಡು ಹೊಡೆದು ಸಂಭ್ರಮ ಆಚರಣೆ : ಪೂಜಾ ಬಂಧನ

ಹುತಾತ್ಮ ದಿನಾಚರಣೆಯಂದು (ಜನವರಿ 30) ಮಹಾತ್ಮಾ ಗಾಂಧೀಜಿಯವರ ಪ್ರತಿಕೃತಿಗೆ ಮತ್ತೆ ಗುಂಡು ಹೊಡೆದು ಸಂಭ್ರಮ ಆಚರಣೆ ಮಾಡಿದ ಹಿಂದೂ ಮಹಾಸಭಾದ ನಾಯಕಿ ಪೂಜಾ ಶಕುನ್ ಪಾಂಡೆ ಅವರನ್ನು ಅಲಿಘಡ್ ಪೊಲೀಸರು ಬಂಧಿಸಿದ್ದಾರೆ.

ಘಟನೆ ಬಳಿಕ ಪಾಂಡೆ ನಾಪತ್ತೆಯಾಗಿದ್ದರು. ಹಿಂದೂ ಮಹಾಸಭಾ ಅಂದು ಗಾಂಧೀಜಿಯವರ ಪ್ರತಿಕೃತಿ ರಚಿಸಿ ಅವರಿಗೆ ಗುಂಡಿಕ್ಕಿದ್ದ ಸಂದರ್ಭವನ್ನು ಮರುಸೃಷ್ಟಿಸಿತ್ತು.
ಈ ಆಚರಣೆಗೆ ಸಂಬಂಧಿಸಿದಂತೆ ಪೊಲೀಸರು ಹಿಂದೂ ಸಂಘಟನೆಯ 12 ಮಂದಿ ಕ್ರಿಮಿನಲ್ ಪ್ರಕರಣ ದಾಖಲಿ ಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೆ ಅವರ ಪತಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾತ್ಮಾ ಗಾಂಧಿ ಅವರನ್ನು ಗೊಡ್ಸೆ ಹತ್ಯೆ ಮಾಡದೇ ಇದ್ದಿದ್ದರೆ ನಾನು ಅವರನ್ನು ಹತ್ಯೆ ಮಾಡುತ್ತಿದ್ದೆ. ಇದನ್ನು ನಾನು ಹೆಮ್ಮೆಯಿಂದ ಹೇಳುತ್ತಿದ್ದೇನೆ’ ಎಂದು ಕಳೆದ ವರ್ಷ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಅವರು ಗಾಂಧೀಜಿ ಪ್ರತಿಕೃತಿಗೆ ಗುಂಡು ಹೊಡೆದು ವಿವಾದ ಸೃಷ್ಟಿಸಿದ್ದರು.

Leave a Reply

Your email address will not be published.