ಹಿರೋ ಇಂಡಿಯಾ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿ : ಬೆಂಗಳೂರು ಎಫ್.ಸಿ, ಕೇರಳ ಬ್ಲಾಸ್ಟರ್ಸ್

ಹಿರೋ ಇಂಡಿಯಾ ಸೂಪರ್ ಲೀಗ್(ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಐದನೇ ಆವೃತ್ತಿ ಪಂದ್ಯದಲ್ಲಿ ಬೆಂಗಳೂರು ಎಫ್.ಸಿ, ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಸವಾಲು ಎಸೆಯಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ. ಆತಿಥೇಯ ಬೆಂಗಳೂರು ತಂಡ ಆಡಿರುವ 13 ಪಂದ್ಯಗಳಿಂದ 30 ಅಂಕ ಕಲೆ ಹಾಕಿ ಪ್ಲೇ ಆಫ್ ನಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿದೆ. ಕೇರಳ ಬ್ಲಾಸ್ಟರ್ಸ್ ಆಡಿದ 14 ಪಂದ್ಯಗಳಲ್ಲಿ 10 ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಆತಿಥೇಯ ತಂಡಕ್ಕೆ ಒಂದು ಚಿಂತೆ ಶುರುವಾಗಿದೆ. ತಂಡದ ನಾಯಕ ಸುನಿಲ್ ಛೆಟ್ರಿ ಗೋಲು ಬರ ಅನುಭವಿಸುತ್ತಿದ್ದಾರೆ. ಇವರು ಟೂರ್ನಿಯಲ್ಲಿ ಸುಮಾರು 600 ನಿಮಿಷಕ್ಕೂ ಅಧಿಕ ಸಮಯದಿಂದ ಗೋಲು ದಾಖಲಿಸಿಲ್ಲ.

ಸ್ಟಾರ್ ಆಟಗಾರ ಮಿಕು ತಂಡಕ್ಕೆ ಮರಳಿದ್ದು, ಬಿಎಫ್ ಸಿ ಗೆ ಬೂಸ್ಟ್ ನೀಡಿದಂತಾಗಿದೆ. ಸಂಘಟಿತ ಆಟದ ಮೇಲೆ ನಂಬಿಕೆ ಇಟ್ಟಿರುವ ಬೆಂಗಳೂರು ತಂಡ, ತವರಿನಲ್ಲಿ ಮತ್ತೊಂದು ಜಯದ ನಗೆಯನ್ನು ಬೀರುವ ಪ್ಲಾನ್ ಮಾಡಿಕೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com