ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಮನೆ, ತೋಟ ಖರೀದಿಸಿದ ಯಶ್

ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟೂರಾದ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ನೂತನವಾಗಿ ತೋಟ ಮನೆ ಖರೀದಿಸಿದ್ದಾರೆ.
ಯಶ್ ತಮ್ಮ ತಾಯಿಯ ಆಸೆಯಂತೆ ಹಾಸನ ಜಿಲ್ಲೆಯಲ್ಲಿರುವ ತಾಯಿ ತವರೂರು ಹಾಗೂ ತಮ್ಮ ಹುಟ್ಟೂರಿನಲ್ಲಿ ಒಂದಷ್ಟು ಆಸ್ತಿ ಖರೀದಿಸಿದ್ದಾರೆ.

ಜಿಲ್ಲೆಯ ವಿದ್ಯಾನಗರದಲ್ಲಿ ಯಶ್ ಮನೆ ಖರೀದಿಸಿದ್ದಾರೆ. ಹುಟ್ಟೂರಿನ ಮೇಲಿರುವ ಅಭಿಮಾನದಿಂದ ಜಿಲ್ಲೆಯಲ್ಲಿ ಯಶ್ ಆಸ್ತಿ ಖರೀದಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ತೋಟ ಮತ್ತು ಮನೆ ಖರೀದಿಸಿರುವ ಯಶ್ ತಮ್ಮ ತಾಯಿ ಅವರ ಹುಟ್ಟೂರು ಹಾಸನದ ದೊಡ್ಡಕೊಂಡಗೊಳ ಗ್ರಾಮದಲ್ಲಿ ಕೃಷಿ ಮಾಡಿ ರೈತರಿಗೆ ಅರಿವು ಮೂಡಿಸುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಮಗನ ಈ ಒಳ್ಳೆಯ ಕಾರ್ಯಕ್ಕೆ ಅವರ ತಂದೆ ತಾಯಿ ಕೂಡ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಕೃಷಿ ಕಾರ್ಯದಲ್ಲಿ ಯಶ್ ಪೋಷಕರು ತೊಡಗಿದ್ದಾರೆ. ವಿದ್ಯಾನಗರದಲ್ಲಿ ವಿಶಾಲ ಮನೆಯನ್ನು ಯಶ್ ಖರೀದಿಸಿದ್ದು, ಶನಿವಾರ ಹಾಗೂ ಭಾನುವಾರ ಇಲ್ಲೇ ತಾಯಿಯೊಂದಿಗೆ ಕಾಲ ಕಳೆದಿದ್ದಾರೆ.

ತಮ್ಮ ಕೆಲಸದ ಒತ್ತಡದಿಂದ ಹೊರಬಂದು ಬಿಡುವಿನ ವೇಳೆಯನ್ನು ಯಶ್ ತನ್ನೂರಲ್ಲೇ ಸಮಯ ಕಳೆಯಲು ಬಯಸಿದ್ದು, ಹುಟ್ಟೂರಿನ ಮೇಲೆ ಇರುವ ಅಭಿಮಾನವೇ ಯಶ್ ಅವರಿಗೆ ವಿದ್ಯಾನಗರದಲ್ಲೊಂದು ಸ್ವಂತಮನೆ ಖರೀದಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಕೃಷಿ ಕುಟುಂಬದಿಂದ ಬಂದ ಯಶ್ ಅಟ್ಟಾವರ ಬಳಿ ಮಾವು, ಸಪೋಟ, ಗೋಡಂಬಿ ತೋಟವನ್ನು ಖರೀದಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com