ನಟ ಶರಣ್ ಈಗ ‘ಅವತಾರ್ ಪುರುಷ’ : ಹುಟ್ಟುಹಬ್ಬದ ದಿನ ಹೊಸ ಲುಕ್ನಲ್ಲಿ ಅಧ್ಯಕ್ಷ

ನಟ ಶರಣ್ ಈಗ ‘ಅವತಾರ್ ಪುರುಷ’ನಾಗಿದ್ದಾರೆ. ಇಂದು ಅವರ ಹುಟ್ಟುಹಬ್ಬವಿದ್ದು, ಹೊಸ ಅವತಾರದಲ್ಲಿ ಕಾಮಿಡಿಯ ಅಧ್ಯಕ್ಷ ಬಂದಿದ್ದಾರೆ. ಸಿಂಪಲ್ ಸುನಿ ಹಾಗೂ ಶರಣ್ ಕಾಂಬಿನೇಶನ್ ನಲ್ಲಿ ಒಂದು ಹೊಸ ಸಿನಿಮಾ ಬರುತ್ತಿದೆ ಎಂಬ ಸುದ್ದಿ ಇತ್ತು. ಈ ಸಿನಿಮಾಗೆ ಈಗ ಟೈಟಲ್ ಫಿಕ್ಸ್ ಆಗಿದೆ. ‘ಅವತಾರ್ ಪುರುಷ’ ಎಂಬ ಹೆಸರಿನ ಮೂಲಕ ಶರಣ್ ಹೊಸ ಆಟ ಶುರು ಮಾಡಿದ್ದಾರೆ.

ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಮೊದಲ ನೋಟಕ್ಕೆ ಎಲ್ಲರ ಗಮನ ಸೆಳೆಯುತ್ತದೆ. ಹಾಲಿವುಡ್ ನ ಸೂಪರ್ ಹಿಟ್ ಸಿನಿಮಾ ‘Avatar’ ಅನ್ನು ಈ ಸಿನಿಮಾದ ಶರಣ್ ಲುಕ್ ಹೋಲುತ್ತಿದೆ. ಆ ‘Avatar’ಗೂ ಈ ‘ಅವತಾರ್ ಪುರುಷನಿಗೂ ಏನು ಸಂಬಂಧ ಎನ್ನುವ ನಿರೀಕ್ಷೆ ಹುಟ್ಟಿದೆ.

ಇದು ಯಾವ ಜಾನರ್ ಸಿನಿಮಾ ಎನ್ನುವುದು ಇನ್ನು ಬಹಿರಂಗ ಆಗಿಲ್ಲ. ಆದರೆ, ಶರಣ್ ಇದ್ದರೆ ಎಂದ ಮೇಲೆ ಸಿನಿಮಾದಲ್ಲಿ ಕಾಮಿಡಿ ಇರುತ್ತದೆ ಎನ್ನುವ ನಂಬಿಕೆ ಇಡಬಹುದು. ಅಂದಹಾಗೆ, ಪುಷ್ಕರ್ ಮಲ್ಲಿಕಾರ್ಯನಯ್ಯ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ‘ಟಗರು’ ಖ್ಯಾತಿಯ ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ಅರ್ಜುನ್ ಎ ಆರ್ ಸಂಭಾಷಣೆ ಹಾಗೂ ಚಿತ್ರಕಥೆಯಲ್ಲಿ ಕೈ ಜೋಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com