ತಮಿಳುನಾಡು ಅಸೆಂಬ್ಲಿಯ 14 ಝಾಡಮಾಲಿ ಹುದ್ದೆಗೆ 4,600 ಇಂಜಿನಿಯರ್‌ಗಳು, ಎಂಬಿಎ ಪದವೀಧರರಿಂದ ಅರ್ಜಿ!

ತಮಿಳುನಾಡಲ್ಲಿ ಇತ್ತೀಚೆಗೆ ಅಸೆಂಬ್ಲಿ ಕಾರ್ಯಾಲಯದ ಝಾಡಮಾಲಿ ಹಾಗೂ ಸ್ವಚ್ಛತಾ ಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು.
ಅದಕ್ಕೆ ಅರ್ಜಿ ಸಲ್ಲಿಸಿದವರು ಯಾರು ಗೊತ್ತಾ? ಎಂ.ಟೆಕ್, ಬಿ.ಟೆಕ್ ಹಾಗೂ ಎಂಬಿಎ, ಸ್ನಾತಕೋತ್ತರ ಪದವಿ ಪೂರೈಸಿದ ಅತ್ಯಂತ ಸುಶಿಕ್ಷಿತ ಮಂದಿ!
ಝಾಡಮಾಲಿಗಳ 10 ಹುದ್ದೆಗಳು ಹಾಗೂ ಸ್ವಚ್ಛತಾ ಕಾರ್ಮಿಕರ 4 ಹುದ್ದೆಗಳು ಖಾಲಿ ಇವೆ. ಅನೇಕ ಡಿಪ್ಲೊಮಾದಾರರೂ ಅರ್ಜಿ ಗುಜರಾಯಿಸಿದ್ದಾರೆ.
ಕಳೆದ ಸೆಪ್ಟೆಂಬರ್ 26ರಂದು ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗೆ ಇರುವ ಅರ್ಹತೆಯೆಂದು ದೈಹಿಕವಾಗಿ ಸಮರ್ಥವಾಗಿ ಹಾಗೂ 18 ವರ್ಷ ಪೂರ್ಣವಾಗಿರಬೇಕು ಎಂಬುದಷ್ಟೇ ಆಗಿತ್ತು.
ವಿದ್ಯಾರ್ಹತೆಯನ್ನೇ ಅಪೇಕ್ಷಿಸಿದ ಈ ಉದ್ಯೋಗಕ್ಕಾಗಿ ಹಾತೊರೆಯುತ್ತಿರುವವರು ಪದವಿ, ಸ್ನಾತಕೋತ್ತರ ಪದವೀಧರರು ಎಂಬುದು ವಿಪರ್ಯಾಸ. ಒಟ್ಟಾರೆ 4,607 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 677 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇದು ರಾಜ್ಯದ ನಿರುದ್ಯೋಗ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com