ಅವಿಶ್ವಾಸಕ್ಕೆ ಅಧ್ಯಕ್ಷರ ಡೋಂಟ್ ಕೇರ್ : ಉಪಾಧ್ಯಕ್ಷರ ಅಂಗಳಕ್ಕೆ ಅವಿಶ್ವಾಸ ಚೆಂಡು ಸಾಧ್ಯತೆ !

ಜಿಲ್ಲಾ ಪಂಚಾಯತ ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ನೀಡಿದ್ದ ನೋಟೀಸ್‍ಗೆ ಅಧ್ಯಕ್ಷರು ಕ್ಯಾರೆ ಎನ್ನದೇ ಮನ್ನುಗ್ಗಿದ್ದಾರೆ.
ಕಳೆದ ದಿ.7 ರಂದು ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ಧ ಜಿಪಂನಲ್ಲಿ 11 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ವಿಶೇಷ ಸಭೆ ಕರೆಯಲು ನೋಟೀಸು ನೀಡಿತ್ತು. ಆದರೆ, 15 ದಿನದೊಳಗೆ ಸಭೆ ಕರೆಯಬೇಕಿದ್ದ ಅಧ್ಯಕ್ಷರು ಕಾಂಗ್ರೆಸ್ ನೋಟಿಸಿಗೆ ಯಾವುದೇ ಬೆಲೆ ನೀಡಿಲ್ಲ. ಸಭೆ ಕರೆಯುವುದು ಬಿಡುವುದು ಅಧ್ಯಕ್ಷರ ವಿವೇಚನೆಗೆ ಬಿಟ್ಟಿದೆ. ಆದರೆ, ಅಧ್ಯಕ್ಷರ ವಿರುದ್ಧವೇ ಅವಿಶ್ವಾಸ ವ್ಯಕ್ತಪಡಿಸಿರುವುದರಿಂದ ಸಹಜವಾಗಿ ಕಾಂಗ್ರೆಸ್ ಸದಸ್ಯರು ಉಪಾಧ್ಯಕ್ಷರ ಬಳಿ ತೆರಳುವುದು ಅನಿವಾರ್ಯವಾಗಲಿದೆ.
ಹೀಗಾಗಿ ಕಾಂಗ್ರೆಸ್ ಸದಸ್ಯರು ಈಗ ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಸಭೆ ಕರೆಯುವಂತೆ ನಿಯಮಾವಳಿಯಂತೆ ಉಪಾಧ್ಯಕ್ಷರಿಗೆ ನೋಟೀಸು ನೀಡಬೇಕಿದೆ.
ಕಾಂಗ್ರೆಸ್ ಸದಸ್ಯರು ನಾಳೆ ಅಥವಾ ನಾಡಿದ್ದು ಉಪಾಧ್ಯಕ್ಷರಿಗೆ ವಿಶೇಷ ಸಭೆ ಕರೆಯಲು ನೋಟೀಸು ನೀಡಿದರೂ, ಬಿಜೆಪಿ ಬೆಂಬಲದೊಂದಿಗೆ ಉಪಾಧ್ಯಕ್ಷ ಖುರ್ಚಿಯಲ್ಲಿರುವ ಶಿವಾನಂದ ಕರಿಗಾರ ಏನು ಮಾಡುತ್ತಾರೆಂಬುದನ್ನು ಕಾದು ನೋಡಬೇಕಿದೆ.
ಒಟ್ಟಾರೆ ಜಿಲ್ಲಾ ಪಂಚಾಯತನ ಅಧಿಕಾರವನ್ನು ಬಿಜೆಪಿಯಿಂದ ಕಿತ್ತುಕೊಳ್ಳಲು ಕಾಂಗ್ರೆಸ್ ಪಕ್ಷದ ಸದಸ್ಯರು ಭಾರೀ ಹರಸಾಹಸ ಪಡುತ್ತಿದ್ದಾರೆ. ಇತ್ತ ಆಡಳಿತಾರೂಢ ಬಿಜೆಪಿ ಕೂಡ ಪ್ರತಿತಂತ್ರ ರೂಪಿಸಿ ಅಧಿಕಾರದಲ್ಲಿ ಮುಂದುವರೆಯಲು ಕಸರತ್ತು ನಡೆಸಿದೆ.

Leave a Reply

Your email address will not be published.

Social Media Auto Publish Powered By : XYZScripts.com