ಇಸ್ರೊದಿಂದ ನಾಳೆ ಭಾರತದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ಉಡಾವಣೆ

ಭಾರತದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ನ್ನು ನಾಳೆ ಫ್ರಾನ್ಸ್ ನ ಗಯಾನ ಉಡ್ಡಯನ ಕೇಂದ್ರದಿಂದ ಉಡಾಯಿಸಲಾಗುತ್ತಿದೆ. ಇಸ್ರೊ ಉಡಾಯಿಸುತ್ತಿರುವ ಅತಿ ತೂಕದ ಉಪಗ್ರಹಗಳಲ್ಲಿ ಇದು ಒಂದಾಗಿದ್ದು ದೇಶದಲ್ಲಿ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಜಿಸ್ಯಾಟ್ -31 ಅಥವಾ ಜಿಯೊಸ್ಟೇಷನರಿ-31 2 ಸಾವಿರದ 535 ಕೆಜಿ ತೂಕವನ್ನು ಹೊಂದಿದ್ದು ಈಗಾಗಲೇ ಕಕ್ಷೆಯಲ್ಲಿರುವ ಕೆಲವು ಹಳೆಯ ಉಪಗ್ರಹಗಳನ್ನು ಇದು ಬದಲಾಯಿಸಲಿದೆ. ಏರಿಯನ್-5 ಉಡ್ಡಯನ ವಾಹಕದ ಮೂಲಕ ನಾಳೆ ನಸುಕಿನ ಜಾವ 2.31 ಗಂಟೆಗೆ ಉಡಾಯಿಸಲಾಗುತ್ತಿದೆ.

ಈ ಉಪಗ್ರಹದ ಜೀವಿತಾವಧಿ 15 ವರ್ಷಗಳು. ವಿಸ್ಯಾಟ್(ನೆರಿ ಸ್ಮಾಲ್ ಅಪೆರ್ಚರ್ ಟರ್ಮಿನಲ್)ನ ನೆಟ್ ವರ್ಕ್, ಟೆಲಿವಿಷನ್ ಸಂಪರ್ಕ, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ, ಡಿಟಿಎಚ್ ದೂರದರ್ಶನ ಸೇವೆ, ಸೆಲ್ಯುಲ್ಲರ್ ಸಂಪರ್ಕ ಇತ್ಯಾದಿ ಸೇವೆಗಳಿಗೆ ಈ ಸ್ಯಾಟಲೈಟನ್ನು ಬಳಸಲಾಗುತ್ತದೆ.ಕಳೆದ ಜನವರಿ 24ರಂದು ಪಿಎಸ್‍ಎಲ್ ವಿ ಸಿ-44 ನ್ನು ಉಡಾಯಿಸಿದ ನಂತರ ಇಸ್ರೊ 2019ರಲ್ಲಿ ಉಡಾಯಿಸುತ್ತಿರುವ ಎರಡನೇ ಉಪಗ್ರಹ ಇದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com