Women’s Hockey : ಐರ್ಲೆಂಡ್ ತಂಡವನ್ನುಮಣಿಸಿದ ಭಾರತ ವನಿತೆಯರ …

ನವಜೋತ್ ಕೌರ್ ಹಾಗೂ ಗುರ್ಜಿತ್ ಕೌರ್ ದಾಖಲಿಸಿದ ಗೋಲುಗಳ ಸಹಾಯದಿಂದ ಸ್ಪೇನ್ ಪ್ರವಾಸದಲ್ಲಿರುವ ಭಾರತ ವನಿತೆಯರ ಹಾಕಿ ತಂಡ 3-0 ಗೋಲಿನ ಅಂತರದಿಂದ ವಿಶ್ವಕಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಐರ್ಲೆಂಡ್ ತಂಡವನ್ನು ಮಣಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಮೊದಲಾವಧಿಯ 13ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ಎರಡನೇ ಅವಧಿಯಲ್ಲಿ ದೀಪಾ ಗ್ರೇಸ್ ಅವರು ನೀಡಿದ ಉತ್ತಮ ಪಾಸ್ ಲಾಭ ಪಡೆದ ರೀನಾ ಐರ್ಲೆಂಡ್ ಗೋಲ್ ಕೀಪರ್ ವಂಚಿಸಿ ತಂಡಕ್ಕೆ 2-0 ಮುನ್ನಡೆ ನೀಡಿದರು.

ಮುಂದಿನ ಎರಡು ಅವಧಿಯಲ್ಲಿ ಮತ್ತೊಂದು ಗೋಲು ದಾಖಲಿಸಿದ ಭಾರತ ಜಯದ ಮಾಲೆ ತೊಟ್ಟಿತು. ಅಲ್ಲದೆ ಐರ್ಲೆಂಡ್ ತಂಡಕ್ಕೆ ಗೋಲು ನೀಡದಂತೆ ತಡೆಯುವ ಯೋಜನೆ ಸಫಲವಾಯಿತು.

Leave a Reply

Your email address will not be published.