ಸಿನಿಮಾದಿಂದ ರಿಟೈರ್‌ ಆಗಿ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಮಾಡ್ತಿವೆ – Upendra…

ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ ಖಂಡಿತಾ ನಾನು ಸಿನಿಮಾದಿಂದ ರಿಟೈರ್‌ ಆಗ್ತೀನಿ. ರಾಜ್ಯಕ್ಕೆ ಬಲಿಷ್ಠವಾದ ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದು ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಪ್ರಜಾಕೀಯ ಪಕ್ಷದಿಂದ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಾಗುವುದು. ಪ್ರಾದೇಶಿಕ ಪಕ್ಷದ ವಿಚಾರ ಇಟ್ಟುಕೊಂಡು ನಾನು ಹೋರಾಟ ಮಾಡುತ್ತಿದ್ದಾನೆ. ಒಂದು ವೇಳೆ ಎಲೆಕ್ಷನ್ ಗೆ ನಿಂತು ಗೆದ್ದರೆ ನನಗೆ ಸಿನಿಮಾ ಮಾಡೋದಿಕೆ ಆಗಲ್ಲ. ನನ್ನ ಸಂಪಾದನೆ, ನನ್ನ ಕೆಲಸ ಎಲ್ಲವೂ ಇಲ್ಲಿರುತ್ತದೆ. ಹೀಗಾಗಿ ಆ ಸಂದರ್ಭದಲ್ಲಿ ಸಿನಿಮಾದಿಂದ ರಿಟೈರ್‌ ಆಗ್ತೀನಿ ಎಂದು ಹೇಳಿದರು.

ಪ್ರಜಾಕೀಯದಿಂದ ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅಂದುಕೊಂಡಿದ್ದೆವು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ.

ಈಗಿರುವ ರಾಜಕೀಯ ವ್ಯವಸ್ಥೆ ಸಂಪೂರ್ಣ ತೆಗೆದು ಹಾಕಿ ನಿಜವಾದ ಪ್ರಜಾಪ್ರಭುತ್ವ ಬರಬೇಕು ಎಂದು 5 ತತ್ವಗಳ ಮೇಲೆ ಈ ಪ್ರಜಾಕೀಯ ಪಕ್ಷವನ್ನು ಕಟ್ಟಿದ್ದೇವೆ. ಈ ಚುನಾವಣಾ ಪ್ರಕ್ರಿಯೆ ಹೇಗಿರಬೇಕೆಂದರೆ ‘ಸೆಲೆಕ್ಷನ್‌ (ಆಯ್ಕೆ), ಎಲೆಕ್ಷನ್‌ (ಚುನಾವಣೆ), ಕರೆಕ್ಷನ್‌ (ತಿದ್ದುವುದು), ರಿಜೆಕ್ಷನ್‌ (ತಿರಸ್ಕರಿಸುವುದು), ಪ್ರಮೋಷನ್‌ (ಬಡ್ತಿ) ಎಂಬ ಪಂಚ ತತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

ಪಕ್ಷಕ್ಕೆ ಬಹುಮತ ಸಿಗುವವರೆಗೂ ಅಧಿಕಾರದಿಂದ ದೂರ ಉಳಿಯುವ ಬಗ್ಗೆ ಪಕ್ಷ ನಿರ್ಧಾರ ಕೈಗೊಂಡಿದೆ’ ಎಂದು ಉಪೇಂದ್ರ ಸ್ಪಷ್ಟಪಡಿಸಿದರು.

‘ಯಡಿಯೂರಪ್ಪ ಅವರಂಥವರು ಹೊಸ ಪಕ್ಷವನ್ನು ಕಟ್ಟಿ ಕೈ ಸುಟ್ಟುಕೊಂಡರು. ನಿಮ್ಮ ಪಕ್ಷಕ್ಕೂ ಅದೇ ಸ್ಥಿತಿ ಆಗುವುದಿಲ್ಲವೇ’ ಎಂಬ ಪ್ರಶ್ನೆಗೆ, ‘ಕೆಲವರು ನಮ್ಮನ್ನು ಯಾವುದೋ ಪಕ್ಷದ ‘ಬಿ’, ‘ಸಿ’ ತಂಡ ಎಂದು ಕರೆಯಬಹುದು. ನಮ್ಮಲ್ಲಿ ಅಮೆರಿಕದಂತೆ ಎರಡು ಪಕ್ಷಗಳ ವ್ಯವಸ್ಥೆ ಇಲ್ಲ. ಸಂವಿಧಾನ ಎಲ್ಲರಿಗೂ ಮುಕ್ತ ಅವಕಾಶ ನೀಡಿದೆ. ನಮ್ಮ ಪಕ್ಷ ಸ್ಪರ್ಧಿಸುವುದರಿಂದ ಮತ್ತೊಂದು ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಲೆಕ್ಕಹಾಕಿದರೆ ಮತ್ತೆ ಹಳೆಯ ರಾಜನೇ ಗೆಲ್ಲಬೇಕು ಎಂದುಕೊಂಡಂತಾಗುತ್ತದೆ. ನಮಗೆ ರಾಜನ ಗೆಲುವಿಗಿಂತ ಪ್ರಜೆಗಳ ಗೆಲುವು ಮುಖ್ಯ’ ಎಂದು ಉಪೇಂದ್ರ ಪ್ರತಿಪಾದಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com