ಸುತ್ತೂರು ಜಾತ್ರೆಯಲ್ಲಿ ಸಿದ್ದರಾಮಯ್ಯ ಕಾಲುಮುಟ್ಟಿ ನಮಸ್ಕರಿಸದ ಗುಣವಂತ ದರ್ಶನ್…

ಕನ್ನಡ ಚಿತ್ರರಂಗ ಎಂದೂ ಮರೆಯದ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂಸ್ಕಾರದ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೆಯೇ.

ಇಂದು ಕನ್ನಡ ಚಿತ್ರರಂಗವನ್ನು ಆಳುತ್ತಿರುವ ಕೆಲವೇ ನಟರಲ್ಲಿ ಮುಂಚೂಣಿಯಲ್ಲಿರುವ ದರ್ಶನ್ ಸವೆಸಿದ್ದು ಮುಳ್ಳಿನ ಹಾದಿ ಎಂಬುದು ಎಲ್ಲರೂ ಬಲ್ಲ ಸತ್ಯ.

ಆದರೆ ಆ ಕಷ್ಟ ಕರ್ಪಣ್ಯಗಳು ದರ್ಶನ್ ಅವರ ಸಂಸ್ಕಾರವನ್ನು ಮುಕ್ಕಾಗಿಸಿಲ್ಲ ಎಂಬುದಕ್ಕೆ ನಿದರ್ಶನವಾಗಿದ್ದು ಈ ಸಾಲಿನ ಸುತ್ತೂರು ಜಾತ್ರೆಯ ವೇದಿಕೆ.

ಮೈಸೂರಿನ ಮಣ್ಣಿನ ಮಗ ದರ್ಶನ್ ತಾವು ಓದಿ ಆಡಿದ, ನಕ್ಕು ನಲಿದು ಬೆಳೆದ ಜೆಎಸ್‌ಎಸ್ (ಕಾಲೇಜು) ಮಠದ ವಾರ್ಷಿಕ ಜಾತ್ರೆಯಲ್ಲಿ ಹಿರಿಯರಿಗೆ ತೋರಿದ ಗೌರವದಲ್ಲಿ ಅವರ ಸಂಸ್ಕಾರ ಅಡಗಿತ್ತು.

ತಮ್ಮ ಭಾಷಣ ಮುಗಿಸಿದ ಬಳಿಕ ವೇದಿಕೆಯ ಮೇಲೆ ಆಸೀನರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತೆರಳಿದ ದರ್ಶನ್ ಅವರ ಕಾಲಿಗೆ ಮುಗಿದು ನಮಸ್ಕರಿಸುವ ಮೂಲಕ ತಮ್ಮ ಮಣ್ಣಿನ ಗುಣ ಪ್ರದರ್ಶನ ಮಾಡಿದ್ದು ಸಭಾಸದರ ಮೆಚ್ಚುಗೆಗೆ ಪಾತ್ರವಾಯಿತು.

ಇದೇ ವೇಳೆ ತಾವು ಸುತ್ತೂರು ಮಠದಿಂದ ನಡೆಸಲಾಗುತ್ತಿರುವ ಜೆಎಸ್‌ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದಾಗಿನ ದಿನಗಳನ್ನು ದರ್ಶನ್ ಸ್ಮರಿಸಿಕೊಂಡರು.

ಅಲ್ಲದೇ ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರು ಅನಾರೋಗ್ಯಕ್ಕೊಳಗಾದ ವೇಳೆ ಜೆಎಸ್‌ಎಸ್ ಆಸ್ಪತ್ರೆ ನಮಗೆ ತುಂಬಾ ಸಹಾಯ ಮಾಡಿದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

Leave a Reply

Your email address will not be published.

Social Media Auto Publish Powered By : XYZScripts.com