Sandalwood : ನಟಸಾರ್ವಭೌಮ ಇಡೀ ಚಿತ್ರಮಂದಿರ ಬುಕ್ ಮಾಡಿದ ಅಪ್ಪು ಅಭಿಮಾನಿಗಳ..

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಬಿಡುಗಡೆಗೆ ಇನ್ನೂ ಒಂದು ವಾರವಷ್ಟೇ ಬಾಕಿ ಇದ್ದು, ಅಭಿಮಾನಿಗಳ ಕುತೂಹಲ ಮುಗಿಲು ಮುಟ್ಟಿದೆ.

ಒಂದು ವಾರಕ್ಕೆ ಮೊದಲೇ ಅಂದರೆ ಫೆ.2ರಿಂದಲೇ ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಮುಂಗಡ ಬುಕಿಂಗ್ ಆರಂಭವಾಗಿದ್ದ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನ ಎಲ್ಲೆಡೆ ಸೋಲ್ಡ್ ಔಟ್ ಆಗಿದೆ.

ಬೆಂಗಳೂರಿನ ಊರ್ವಶಿ, ಪ್ರಸನ್ನ, ಕಾವೇರಿ ಸೇರಂತೆ ಐದು ಚಿತ್ರಮಂದಿರಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗಿದ್ದು, ಅಭಿಮಾನಿಗಳು ಅತ್‌ಉತ್ಸಾಹದಿಂದ ಟಿಕೆಟ್ ಖರೀದಿಗೆ ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಇದೆಲ್ಲದರ ನಡುವೆ ಕನ್ನಡ ಚಿತ್ರರಂಗದ ಮಟ್ಟಿಗೆ ಮೊದಲು ಎನ್ನಬಹುದಾದ ಬೆಳವಣಿಗೆಯಲ್ಲಿ ಅಪ್ಪು ಅಭಿಮಾನಿ ದೇವರುಗಳು ಊರ್ವಶಿ ಚಿತ್ರಮಂದಿರದಲ್ಲಿ ಒಂದು ಪೂರ್ತಿ ಶೋನ ಟಿಕೆಟ್ ಖರೀದಿಸಿದ್ದಾರೆ.

ಅಭಿಮಾನದ ಉಚ್ಛ್ರಾಯ ಎನ್ನಬಹುದಾದ ಈ ಬೆಳವಣಿಗೆಯಲ್ಲಿ ಎರಡು ಅಭಿಮಾನಿ ಗುಂಪುಗಳ ಮುಖಂಡರು ಸೇರಿಕೊಂಡು ಬರೋಬ್ಬರಿ 2.62 ಲಕ್ಷ ರೂ ತೆತ್ತು ಮೊದಲ ದಿನದ ಮೊದಲ ಪ್ರದರ್ಶನದ ಎಲ್ಲ 1200 ಟಿಕೆಟ್ ಬುಕ್ ಮಾಡಿದ್ದಾರಂತೆ.

ಚಿತ್ರದಲ್ಲಿ ಪುನೀತ್​ ಮೊದಲ ಬಾರಿಗೆ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದು, ನಿರ್ದೇಶಕ ಪವನ್​ ಒಡೆಯರ್​ ಸಿನಿಮಾದಲ್ಲಿ ಪ್ರೇತಗಳ ವಿಚಾರವನ್ನೂ ಹೇಳುತ್ತಿದ್ದಾರಂತೆ. ರಾಕ್​ಲೈನ್​ ವೆಂಕಟೇಶ್​ ನಿರ್ಮಾಣದ ಈ ಚಿತ್ರದಲ್ಲಿ ರಚಿತಾ ರಾಮ್​, ಅನುಪಮಾ ಪರಮೇಶ್ವರಂ ನಾಯಕಿರಾಗಿ ನಟಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com