ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ್ ಎಕ್ಸ್ ಪ್ರೆಸ್ ರೈಲು : 6 ಮಂದಿ ದುರ್ಮರಣ

ಭಾನುವಾರ ಬೆಳಗಿನ ಜಾವವೇ ದುರಂತದ ಸುದ್ದಿ ಕೇಳಿಬಂದಿದೆ. ದೆಹಲಿಗೆ ಹೊರಟಿದ್ದ ಸೀಮಾಂಚಲ್ ಎಕ್ಸ್ ಪ್ರೆಸ್ ರೈಲು ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಹಳಿ ತಪ್ಪಿದ್ದು ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನಸುಕಿನ ಜಾವ 3:58ರ ವೇಳೆಗೆ ಶಹದೈ ಬುಝರ್ಗ್‌ನಲ್ಲಿ ಈ ಅಪಘಾತ ಸಂಭವಿಸಿದೆ ಮತ್ತು 9 ಕೋಚ್‌ಗಳು ಹಳಿತಪ್ಪಿವೆ. ಮೂರು ಕೋಚ್‌ಗಳು ತಲೆಕೆಳಗಾಗಿದ್ದು, ಸಂಪೂರ್ಣವಾಗಿ ಹಾನಿಗೊಂಡಿವೆ. ಬಿಹಾರದ ಜೋಗ್‌ಬನಿಯಿಂದ ದೆಹಲಿಯ ಆನಂದ್ ವಿಹಾರ ಟರ್ಮಿನಲ್‌ಗೆ ಹೊರಟಿದ್ದ ಈ ಸುಪರ್ ಫಾಸ್ಟ್ ರೈಲು ಅಪಘಾತ ಸಂಭವಿಸುವ ವೇಳೆ ಪೂರ್ಣ ವೇಗದಲ್ಲಿತ್ತು.

ಒಂದು ಜನರಲ್ ಕೋಚ್, ಒಂದು ಎಸಿ ಕೋಚ್, ಮೂರು ಸ್ಲೀಪರ್ ಕೋಚ್‌ಗಳು ಹಾಗೂ ಇತರೆ ನಾಲ್ಕು ಕೋಚ್‌ಗಳು ಹಳಿ ತಪ್ಪಿವೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಸಂತ್ರಸ್ತರ ಆರೈಕೆಗಾಗಿ ವೈದ್ಯರ ತಂಡ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್‌ನ ಎರಡು ತಂಡಗಳು ಸ್ಥಳಕ್ಕೆ ಧಾವಿಸಿವೆ.

Leave a Reply

Your email address will not be published.