Cricket : Kohli & Dhoni ಪತ್ನಿಯರು ಶಾಲಾ ದಿನದ ಸಹಪಾಠಿಗಳು…

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇವರಿಬ್ಬರ ಪತ್ನಿಯರಾದ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ ಬಾಲ್ಯದ ಸಹಪಾಠಿಗಳಾ? ಹೌದೆನ್ನುತ್ತಿದೆ ಚಿತ್ರಗಳು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭರ್ಜರಿಯಾಗಿ ಹರಿದಾಡುತ್ತಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಎಷ್ಟು ಖ್ಯಾತಿ ಪಡೆದಿದ್ದರೋ ಅವರ ಪತ್ನಿಯರೂ ಕೂಡ ಅಷ್ಟೇ ಹೆಸರು ಪಡೆದಿದ್ದಾರೆ.

ಧೋನಿ ಪತ್ನಿ ಸಾಕ್ಷಿ ಹಾಗೂ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಇಬ್ಬರು ಒಂದೇ ಶಾಲೆಯ ವಿದ್ಯಾರ್ಥಿಗಳು ಎನ್ನುವ ವಿಚಾರ ಸದ್ಯ ಬಹಿರಂಗವಾಗಿದ್ದು, ಇಬ್ಬರು ಶಾಲೆಯ ದಿನಗಳಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕ್ಷಿಯಾಗಿವೆ. ಇಬ್ಬರು ಓದಿದ್ದು ಅಸ್ಸಾಂನ ಸಣ್ಣ ಪಟ್ಟಣದಲ್ಲಿ.

ಅನುಷ್ಕಾ ಶರ್ಮಾ ಎಫ್‌ಸಿ ಎನ್ನುವ ಟ್ವಿಟರ್‌ ಅಕೌಂಟ್‌ನಲ್ಲಿ ಪ್ರಕಟಗೊಂಡಿರುವ ಚಿತ್ರಗಳಲ್ಲಿ ಕೆಲವದರಲ್ಲಿ ಅನುಷ್ಕಾ ಮತ್ತು ಸಾಕ್ಷಿಯನ್ನು ಗುರುತಿಸಬಹುದು.

ಮಹೇಂದ್ರ ಸಿಂಗ್ ಧೋನಿ ತಮ್ಮ ಬಾಲ್ಯದ ಗೆಳತಿ ಸಾಕ್ಷಿಯವರನ್ನು ವಿವಾಹವಾಗಿದ್ದು, ಇವರಿಗೆ ಜೀವಾ ಎಂಬ ಮುದ್ದಾದ ಮಗಳಿದ್ದಾಳೆ. ಇನ್ನು ವಿರಾಟ್ ಕೊಹ್ಲಿ, ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ವಿವಾಹವಾಗಿದ್ದಾರೆ.

ಮೊದಲಿನಿಂದಲೂ ಸಾಕ್ಷಿ ಸಿಂಗ್ ರಾವತ್ ಮತ್ತು ಅನುಷ್ಕಾ ಶರ್ಮಾ ಆತ್ಮೀಯ ಸ್ನೇಹಿತೆಯಾಗಿದ್ದರಂತೆ. ಇಬ್ಬರೂ ಅಸ್ಸಾಂನ ಸೇಂಟ್ ಮೇರಿ ಮಾರ್ಗರಿಟಾ ಶಾಲೆಯಲ್ಲಿ ಕಲಿತಿದ್ದಾರೆ. ಹೀಗೆಂದು ಅನುಷ್ಕಾ 2013ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಂದು ಸ್ವತಃ ಅನುಷ್ಕಾ ಅವರೇ ಹೇಳಿದ್ದರಿಂದ ಇಂದು ಹರಿದಾಡುತ್ತಿರುವ ಚಿತ್ರಗಳು ನಿಜವೆನ್ನಬಹುದು.

Leave a Reply

Your email address will not be published.

Social Media Auto Publish Powered By : XYZScripts.com