IND vs NZ : ರಾಯುಡು ಅರ್ಧಶತಕ – ಭಾರತಕ್ಕೆ 35 ರನ್ ಜಯ ; 4-1ರಿಂದ ಸರಣಿ ಗೆದ್ದ ಟೀಮ್ಇಂಡಿಯಾ

ವೆಲ್ಲಿಂಗ್ಟನ್ ನ ವೆಸ್ಟ್ ಪ್ಯಾಕ್ ಕ್ರೀಡಾಂಗಣದಲ್ಲಿ ರವಿವಾರ ನಡೆದ 5ನೇ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಭಾರತ 35 ರನ್ ಜಯ ಗಳಿಸಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯನ್ನು 4-1 ರಿಂದ ಟೀಮ್ಇಂಡಿಯಾ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 49.5 ಓವರ್ ಗಳಲ್ಲಿ 252 ರನ್ ಮೊತ್ತಕ್ಕೆ ಆಲೌಟ್ ಆಯಿತು. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಬಾರಿಸಿದ ಅಂಬಟಿ ರಾಯುಡು (90) ತಂಡಕ್ಕೆ ಆಸರೆಯಾದರು.

ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ 44.1 ಓವರ್ ಗಳಲ್ಲಿ 217 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಭಾರತದ ಪರವಾಗಿ ಸ್ಪಿನ್ನರ್ ಯಜುವೇಂದ್ರ ಚಹಲ್ 3, ಮೊಹಮ್ಮದ್ ಶಮಿ 2 ಹಾಗೂ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.

ಅಂಬಟಿ ರಾಯುಡು ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಟೀಮ್ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸರಣಿಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

 

Leave a Reply

Your email address will not be published.