Feku Social media : ಉರ್ಸುಲಾ ಅ್ಯಂಡ್ರೆಸ್‍ಳನ್ನು ಸೋನಿಯಾ ಮಾಡಿದ ಸುಳ್ಳರು…

ಪ್ರಿಯಾಂಕ ಗಾಂಧಿಯವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಸುದ್ದಿ ಬಂದಾಗಿನಿಂದ, ಅವರನ್ನು ಅವಹೇಳನ ಮಾಡುವ ಹಲವಾರು ಸುಳ್‍ಸುದ್ದಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಹಿಂದೆ ಸೋನಿಯಾ ಗಾಂಧಿಯವರ ಕುರಿತು ಅಸಹ್ಯ ಸುಳ್ ಒಂದನ್ನು ಬಲಪಂಥೀಯರು ಹರಿಬಿಟ್ಟಿದ್ದರು. ಈಗ ಆ ಸುದ್ದಿಯೂ ಮತ್ತೆ ಓಡಾಡಲು ಆರಂಭಿಸಿದೆ.
ಹೆಣ್ಣು ಮಕ್ಕಳೇ ಎಚ್ಚರ, ಮೋದಿಯ ಉಗ್ರ ಅಭಿಮಾನಿಗಳು (ನಮೋಭಕ್ತರು) ಎಂದುಕೊಳ್ಳುವವರು ನಿಮಗೆ ಗೊತ್ತಿದ್ದರೆ ಹುಷಾರಾಗಿರಿ. ಅವರು ಯಾವಾಗ ನಿಮ್ಮ ಫೋಟೊವನ್ನು ಯಾವುದೋ ಅರೆ ಬೆತ್ತಲೆ ಫೋಟೊದೊಂದಿಗೆ ಕ್ಲಬ್ ಮಾಡಿ ವೈರಲ್ ಮಾಡುವರೋ ಗೊತ್ತಿಲ್ಲ. ಇಂತಹವರು ನನ್ನ ಅಭಿಮಾನಿಗಳಲ್ಲ ಎಂದು ಇವತ್ತಿಗೂ ಮೋದಿಯಾಗಲಿ, ಬಿಜೆಪಿಯಾಗಲಿ ನಿರಾಕರಣೆ ಮಾಡಿಲ್ಲ. ಮೋದಿಯವರು ಟ್ವಿಟರ್‍ನಲ್ಲಿ ಫಾಲೋ ಮಾಡುವ ವ್ಯಕ್ತಿಗಳಲ್ಲಿ ಹಲವಾರು ಲಂಪಟ ಬುದ್ದಿಯ ವಿಕೃತರಿದ್ದಾರೆ. ಅವರ ಟ್ವೀಟ್‍ಗಳನ್ನು ಗಮನಿಸಿದರೆ ಅವರ ಯೋಗ್ಯತೆ, ಅಭಿರುಚಿ ಗೊತ್ತಾಗಿ ಬಿಡುತ್ತದೆ.

ಬಾಂಡ್ ಪಿಚ್ಚರ್ ಫೋಟೊ

ಮಿಥ್ಯ: ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೊವನ್ನು ವೈರಲ್ ಮಾಡಲಾಗಿದ್ದು ಸೋನಿಯಾ ಗಾಂಧಿಯವರ ತೇಜೋವಧೆ ಮಾಡುವ ಯತ್ನ ಮಾಡಲಾಗಿದೆ. ಈ ಫೋಟೊದಲ್ಲಿ ಸೋನಿಯಾ ಬೀಚ್ ಉಡುಪಿನಲ್ಲಿ ಗಂಡಸೊಬ್ಬರೊಂದಿಗಿದ್ದಾರೆ ಎಂಬ ಚಿತ್ರಣ ಸೃಷ್ಟಿಸುವುದು ಇದರ ಉದ್ದೇಶ. ‘ಹಲೋ ಕಾಂಗ್ರೆಸ್ಸಿಗರೇ, ನೋಡಿ ನಿಮ್ಮ ನಾಯಕಿ ಸೋನಿಯಾ ಅವಸ್ಥೆಯನ್ನು. ಇದೂ ಸುಳ್ಳು ಅಂತೀರಾ?’ ಎಂದು ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಬಲಪಂಥೀಯ ಫೇಸ್‍ಬುಕ್ ಪೇಜ್ ಈ ಸಂಚು ರೂಪಿಸಿದೆ. ಇದು 24 ಗಂಟೆಗಳಲ್ಲಿ 10 ಸಾವಿರ ಬಾರಿ ಶೇರ್ ಆಗಿದೆ.
ಈ ನಕಲಿ ಫೋಟೊ ಇಟ್ಟಕೊಂಡು ‘ದೇಶ ರಕ್ಷಿಸಿ’ ಅಭಿಯಾನ ನಡೆಸುತ್ತಿರುವ ಮುಖೇಡಿ ಗುಂಪುಗಳ ಫೇಸ್Àಬುಕ್ ಪೇಜ್‍ಗಳು: ವಿ ಸಪೋರ್ಟ್ ಪಿಎಂ ಮೋದಿ, ವೋಟ್ ಫಾರ್ ಬಿಜೆಪಿ, ವೋಟ್ ಫಾರ್ ಯೊಗಿ ಆದಿತ್ಯನಾಥ್ ಇತ್ಯಾದಿ.
ಸತ್ಯ: ಈ ಫೋಟೊದಲ್ಲಿರುವುದು ಸೋನಿಯಾ ಅಲ್ಲವೇ ಅಲ್ಲ. ಮೊದಲ ಜೇಮ್ಸ್ ಬಾಂಡ್ ಚಿತ್ರ ‘ಆಡಿ. ಓಔ’ ಚಲನಚಿತ್ರದ ಸೆಟ್‍ನಲ್ಲಿ ಸ್ವಿಸ್ ನಟಿ ಉರ್ಸುಲಾ ಅ್ಯಂಡ್ರೆಸ್ ನಟನೆಯ ಸ್ಟಿಲ್ ಇವು. ಆಕೆಯ ಜೊತೆಗಿರುವಾತ ಬಾಂಡ್ ಪಾತ್ರ ಮಾಡಿದ ಸ್ಕಾಟಿಷ್ ನಟ ಸಿಯಾನ್ ಕಾನರಿ.
ಸತ್ಯ ಇಷ್ಟು ಸಿಂಪಲ್ಲಾಗಿದೆ. ಇದನ್ನು ಕೆಲವರು ವಿವರಿಸಿದರೂ ಸುಳ್ ಸುಬ್ಬರು ವಿಕೃತ ನಗೆಯಲ್ಲೇ ಕಾಲ ಹಾಕುತ್ತಿದ್ದಾರೆ. ಈ ಹಿಂದೆಯೂ ಸೋನಿಯಾ ಗಾಂಧಿ ತೇಜೋವಧೆಗೆ ಸಾಕಷ್ಟು ಯತ್ನ ಮಾಡಲಾಗಿದೆ. ಹಿಂದೆ ಇದೇ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಪೇಜ್‍ನಲ್ಲಿ ಫೋಟೊಶಾಪ್ ಮಾಡಿ ಸೋನಿಯಾ ಮತ್ತು ಮಾಲ್ಡಿವ್ಸ್‍ನ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಫೋಟೊ ಹಾಕಲಾಗಿತ್ತು. ಸೋನಿಯಾ ಗಯೂಮ್ ತೊಡೆ ಮೇಲೆ ಕುಳಿತಂತೆ ಫೋಟೊ ಸೃಷ್ಟಿಸಲಾಗಿತ್ತು.
ಹಾಲಿವುಡ್ ನಟಿ ರೀಸ್ ವಿಡರ್‍ಸ್ಪೂನ್ ಫೋಟೊ ಹಾಕಿ, ಸೋನಿಯಾ ಯುವತಿಯಾಗಿದ್ದಾಗ ಬಾರ್ ವೇಟ್ರೆಸ್ ಆಗಿದ್ದಳು ಎಂದು ಸುಳ್ ಹರಡಲಾಗಿತ್ತು. ಮರ್ಲಿನ್ ಮನ್ರೋ ಫೋಟೊಕ್ಕೆ ಸೋನಿಯಾ ಮುಖ ಪೇಸ್ಟ್ ಮಾಡಿ, ಬಾರ್‍ಗರ್ಲ್ ಸೋನಿಯಾ ಎಂದು ತಿರುಚಲಾಗಿತ್ತು.
ಸೋನಿಯಾ ಈಗ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಈಗಲೂ ಅವರ ವಿರುದ್ಧ ವಿಕೃತ ಸುಳ್‍ಗಳನ್ನು ಹರಡಲಾಗುತ್ತಿದೆ. ಈ ವಿಕೃತರ ಮಾಡೆಲ್‍ಗಳೇ ಸಾರ್ವಜನಿಕ ಸಭೆಗಳಲ್ಲೇ ಸುಳ್ಳುಗಳನ್ನು ಸತ್ಯ ಎಂಬಂತೆ ಕಿರುಚುವಾಗ ಇನ್ನೇನಾಗುತ್ತದೆ?
ಫೋಟೊ ಶಿರ್ಷಿಕೆ: ಚಿತ್ರದಲ್ಲಿರುವುದು ಸೋನಿಯಾ ಗಾಂಧಿ ಅಲ್ಲ, ‘ಆಡಿ. ಓಔ’ ಚಲನಚಿತ್ರದಲ್ಲಿ ನಟಿ ಉರ್ಸುಲಾ ಅ್ಯಂಡ್ರೆಸ್, ನಟ ಸಿಯಾನ್ ಕಾನರಿ.

Leave a Reply

Your email address will not be published.

Social Media Auto Publish Powered By : XYZScripts.com