ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ದೂರವಾಗಿದ್ದಾರಂತೆ : ಸಾಕ್ಷಿ ಕೇಳಿದ ಕೊಡಗಿನ ಕುವರಿ

ಸಿನಿಮಾದಲ್ಲಿ ಹಿಟ್ ಆದ್ಮೇಲೆ ಒಂದು ರೌಂಡ್ ಎಲ್ಲಾ ವುಡ್ ಗಳಿಗೆ ಭೇಟಿ ನೀಡುವುದು ಸದ್ಯ ತಾರೆಯರಿಗೆ ಟ್ರೆಂಡ್ ಆಗಿ ಹೋಗಿದೆ. ಹೀಗಾಗಿ ಸ್ಯಾಂಡಲ್ ವುಡ್ ನಲ್ಲಿ ಬೆಳೆದ ನಟ ನಟಿಯರು ಬಾಲಿವುಡ್ ಟಾಲಿವುಡ್ ಗಳಲ್ಲಿ ಅಭಿನಯ ಮಾಡ್ತಾಯಿದ್ದಾರೆ. ಈ ಸಾಲಿನಲ್ಲಿ ರಶ್ಮಿಕ ಮಂದಣ್ಣ ಕೂಡ ಒಬ್ಬರು. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬೆಳೆದ ಕೊಡಗಿನ ಕುವರಿ ರಶ್ಮಿಕ.

ರಶ್ಮಿಕಾ ಮಂದಣ್ಣ ಬಗ್ಗೆ ಇತ್ತೀಚೆಗಂತೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಸ್, ನೆಗೆಟಿವ್ ಕಾಮೆಂಟ್ಸ್ ಜಾಸ್ತಿ ಆಗಿವೆ. ಹಾಗೇ, ಗಾಸಿಪ್ ಕಾಲಂಗಳಲ್ಲೂ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ”ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ರಶ್ಮಿಕಾ ಮಂದಣ್ಣ, ಟಾಲಿವುಡ್ ಗೆ ಹೋದ ಮೇಲಂತೂ ಅಲ್ಲೇ ಸೆಟಲ್ ಆಗಿದ್ದಾರೆ. ಮರಳಿ ಕನ್ನಡ ಚಿತ್ರರಂಗದ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ, ಸ್ಯಾಂಡಲ್ ವುಡ್ ಮಂದಿ ರಶ್ಮಿಕಾ ಬಗ್ಗೆ ಅಪ್ ಸೆಟ್ ಆಗಿದ್ದಾರೆ” ಎಂದು ಇತ್ತೀಚೆಗಷ್ಟೇ ಇಂಗ್ಲೀಷ್ ವೆಬ್ ಸೈಟ್ ವೊಂದು ವರದಿ ಮಾಡಿತ್ತು. ಈ ವರದಿಯನ್ನು ಓದಿ ರಶ್ಮಿಕಾ ಮಂದಣ್ಣ ಕೊಂಚ ಗರಂ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಮಂದಣ್ಣ ಈ ವರದಿಗೆ ಸಾಕ್ಷಿ ಕೊಡಿ ಎಂದು ಒತ್ತಾಯಿಸಿದ್ದಾರೆ.

”ರಶ್ಮಿಕಾ ಮಂದಣ್ಣ ಸದ್ಯದ ಟಾಲಿವುಡ್ ಸೆನ್ಸೇಷನ್. ಇದೀಗ ಅವರ ಕೈಯಲ್ಲಿ ಎರಡು ತೆಲುಗು ಚಿತ್ರಗಳಿವೆ. ಟಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ” ಎಂದು ಇಂಗ್ಲೀಷ್ ವೆಬ್ ಸೈಟ್ ವೊಂದು ವರದಿ ಮಾಡಿತ್ತು. ಇಷ್ಟೇ ಆಗಿದ್ರೆ, ರಶ್ಮಿಕಾ ಬೇಸರ ಮಾಡಿಕೊಳ್ಳುತ್ತಿರಲಿಲ್ಲ.

”ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ಬಂದವರು. ತೆಲುಗು ಚಿತ್ರರಂಗದಿಂದ ರಶ್ಮಿಕಾಗೆ ಉತ್ತಮ ಸಂಭಾವನೆ ಸಿಗುತ್ತಿದೆ. ಹೀಗಾಗಿ, ಕನ್ನಡ ಚಿತ್ರರಂಗದ ಕಡೆಗೆ ರಶ್ಮಿಕಾ ಮುಖ ಮಾಡುತ್ತಿಲ್ಲ. ಹೀಗಾಗಿ, ಆಕೆಯ ವಿರುದ್ಧ ಸ್ಯಾಂಡಲ್ ವುಡ್ ಮಂದಿ ಅಪ್ಸೆಟ್ ಆಗಿದ್ದಾರೆ” ಎಂದು ಇಂಗ್ಲೀಷ್ ವೆಬ್ ಸೈಟ್ ವರದಿ ಮಾಡಿದೆ.

ಇಂಗ್ಲೀಷ್ ವೆಬ್ ಸೈಟ್ ಮಾಡಿರುವ ವರದಿಯ ಲಿಂಕ್ ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ಅದಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವರದಿ ಬಗ್ಗೆ ಬೇಸರಗೊಂಡಿದ್ದರೂ, ನಗು ನಗುತ್ತಲೇ ಮ್ಯಾನೇಜ್ ಮಾಡಿ ಟ್ವೀಟ್ ಮಾಡಿದ್ದಾರೆ.

”ಇದನ್ನು ಯಾರ್ರೀ ಹೇಳಿದ್ದು.? ದಯವಿಟ್ಟು ನನಗೆ ಉತ್ತರ ಕೊಡಿ. ನನ್ನ ಬಗ್ಗೆ ನನ್ನ ಚಿತ್ರರಂಗ ಕೋಪಗೊಂಡಿದೆ ಅಂತ ವರದಿ ಆಗಿರುವುದು ಸತ್ಯಕ್ಕೆ ದೂರವಾದ ಮಾತು. ಇದನ್ನು ನಾನು ನಂಬುವುದಿಲ್ಲ. ನನಗೆ ಸಾಕ್ಷಿ ಬೇಕು.. ಕೊಡಿ ಕೊಡಿ..” ಎಂದು ರಶ್ಮಿಕಾ ಮಂದಣ್ಣ ಒತ್ತಾಯಿಸಿದ್ದಾರೆ.

ರಶ್ಮಿಕಾ ರವರ ಈ ಟ್ವೀಟ್ ಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ತರಹೇವಾರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೆಲವರು ರಶ್ಮಿಕಾ ಪರ ಬ್ಯಾಟಿಂಗ್ ಮಾಡಿದರೆ, ಹಲವರು ಕಾಲೆಳೆದಿದ್ದಾರೆ. ಅಂದ್ಹಾಗೆ, ರಶ್ಮಿಕಾ ಕನ್ನಡದ ‘ಯಜಮಾನ’ ಮತ್ತು ‘ಪೊಗರು’ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ನಿಮ್ಮ ಗಮನದಲ್ಲಿರಲಿ.

Leave a Reply

Your email address will not be published.

Social Media Auto Publish Powered By : XYZScripts.com