ಬೆಳ್ಳಿತೆರೆಯ ಮೇಲೆ ಡಿ.ಕೆ ರವಿ ಲೈಫ್ ಸ್ಟೋರಿ..? ಚರ್ಚೆಗೆ ಗ್ರಾಸವಾದ ‘ಚಂಬಲ್’ ಸಿನಿಮಾ ಟ್ರೇಲರ್

ಬೆಳ್ಳಿತೆರೆಯ ಮೇಲೆ ಡಿ.ಕೆ ರವಿ ಲೈಫ್ ಸ್ಟೋರಿ ಹೇಳುವ ಚಂಬಲ್ ಸಿನಿಮಾ ಟ್ರೇಲರ್ ಸಾಕಷ್ಟು ಜನರ ನಿದ್ದೆಗೆಡಿಸಿದೆ. ದಕ್ಷ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಸಾವು ಇಂದಿಗೂ ನಿಗೂಢ. ಡಿ.ಕೆ ರವಿ ಅವರ ಸಾವಿನ ರಹಸ್ಯ ಬಿಚ್ಚಿಡುತ್ತಾ ಸಿನಿಮಾ ಅನ್ನೂ ಕುತೂಹಲ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸೃಷ್ಟಿಯಾಗಿದೆ.

ಸಿನಿಮಾದ ಟ್ರೇಲರ್ ಡಿ.ಕೆ ರವಿ ಅವರ ಲೈಫ್ ನಂತೆ ಕಾಣುತ್ತಿದ್ದು ಸಿನಿಮಾ ರಿಲೀಸ್ ಗಾಗಿ ಜನ ಕಾಯುತ್ತಿದ್ದಾರೆ. ಇಂಥಹ ಅನುಮಾನವನ್ನ ನಿರ್ದೇಶಕರ ಮುಂದೆ ಪ್ರಸ್ತಾಪಿಸಿದಾಗ ‘ನೋಡುಗರ ಭಾವಕ್ಕೆ ಬಿಟ್ಟಿದ್ದು’ ಎನ್ನುವ ನಿರ್ದೇಶಕರ ಹೇಳಿಕೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ನಟ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ ಸಿನಿಮಾ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದ ಅನೇಕರಿಗೆ ಇದು ಜಿಲ್ಲಾಧಿಕಾರಿ ಡಿಕೆ ರವಿ ಅವರ ಜೀವನಾಧಾರಿತ ಸಿನಿಮಾನ ಎನ್ನುವ ಕುತೂಹಲ ಮೂಡಿದೆ.

ಸಿನಿಮಾದಲ್ಲಿ ಸತೀಶ್ ನೀನಾಸಂ ಜಿಲ್ಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸತೀಶ್ ಲುಕ್, ಕಾಸ್ಟೂಮ್, ಅವರ ಮ್ಯಾನರಿಸಂ ಎಲ್ಲವೂ ಡಿಕೆ ರವಿ ಅವರನ್ನು ಹೋಲುತ್ತಿದೆ. ಅದರಲ್ಲಿಯೂ ಕರಗ ಹೊತ್ತಿರುವ ಸ್ಟೈಲ್ ನೋಡಿದಾಗ ಇದು ರವಿ ಅವರ ಲೈಫ್ ಸ್ಟೋರಿ ಸಿನಿಮಾ ಇರಬೇಕು ಎಂಬ ಅನುಮಾನ ಮೂಡುತ್ತದೆ.

‘ಚಂಬಲ್’ ಸತ್ಯ ಫಟನೆಗಳ ಮೇಲೆ ಹೆಣೆಯಲಾದ ಕಥೆಯ ಸಿನಿಮಾವಾಗಿದೆ ಎಂದು ಹೇಳಿರುವ ಚಿತ್ರತಂಡ ಡಿಕೆ ರವಿ ಅವರ ಸಿನಿಮಾನ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಟ್ರೇಲರ್ ರಿಲೀಸ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.

ಸಿನಿಮಾದ ಟ್ರೇಲರ್ ಗೆ ದೊಡ್ಡ ಮಟ್ಟದ ಪ್ರಶಂಸೆ ಸಿಕ್ಕಿದೆ. ಸದ್ಯ ಟ್ರೇಲರ್ ಯೂ ಟ್ಯೂಬ್ ನಲ್ಲಿ ನಂಬರ್ 2 ಟ್ರೆಂಡಿಂಗ್ ವಿಡಿಯೋ ಆಗಿದೆ. ‘ಪೃಥ್ವಿ’ ಹಾಗೂ ‘ಸವಾರಿ’ ಸಿನಿಮಾಗಳ ಖ್ಯಾತಿಯ ಜೇಕಬ್ ವರ್ಗಿಸ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸತೀಶ್ ನೀನಾಸಂ, ಸೋನು ಗೌಡ, ಪವನ್ ಕುಮಾರ್, ಕಿಶೋರ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.

 

Leave a Reply

Your email address will not be published.