ಕಡಿಮೆ ದರದಲ್ಲಿ ಹೊಸ ತಂತ್ರಜ್ಞಾನಗಳುಳ್ಳ ಟಿವಿ : 4,999 ರೂ.ಗೆ 32 ಇಂಚಿನ ಸ್ಮಾರ್ಟ್ ಟಿವಿ

ಕಡಿಮೆ ದರದಲ್ಲಿ ಹೊಸ ತಂತ್ರಜ್ಞಾನಗಳುಳ್ಳ ಟಿವಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸ್ಯಾಮಿ ಇನ್ಫರ್ಮೆಟಿಕ್ಸ್‌ ಸಂಸ್ಥೆ 32 ಇಂಚಿನ ಆ್ಯಂಡ್ರಾಯ್ಡ್‌ ಸ್ಮಾರ್ಟ್ ಟಿವಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಇದರ ಬೆಲೆ 4,999 ರೂಪಾಯಿ.

ಟಿವಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಅವಿನಾಶ್ ಮೆಹ್ತಾ, ಕಡಿಮೆ ದರದಲ್ಲಿ ಟಿವಿ ಗ್ರಾಹಕರ ಕೈ ಸೇರಿಲಿದ್ದು, ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. ಮೇಕ್ ಇನ್ ಇಂಡಿಯಾ ಹಾಗೂ ಸ್ಟಾರ್ಟ್‌ ಅಪ್ ಇಂಡಿಯಾ ಯೋಜನೆಯಡಿ ಈ ಟಿವಿ ರೂಪುಗೊಂಡಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಬೆಲೆಯಿಂದಾಗಿ ಟಿವಿ ಹೊಂದಿರದ ಗ್ರಾಹಕರು ಇದರ ಲಾಭ ಪಡೆಯಬಹುದಾಗಿದೆ. ಟಿವಿಯ ಎಲ್ಲ ಬಿಡಿಭಾಗಗಳನ್ನು ಭಾರತದಲ್ಲೇ ತಯಾರಿಸಲಾಗಿದ್ದು, ಸುಮಾರು 200 ಜನರಿಗೆ ಉದ್ಯೋಗ ಸಿಕ್ಕಂತಾಗಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published.