ಬೇಸಿಗೆ ಬಿಸಿಲಿನಿಂದ ರಕ್ಷಣೆ, ಆಹಾರ ಪದ್ದತಿ ಹೇಗಿರಬೇಕು..? : ಇಲ್ಲಿದೆ ಕೆಲವು ಟಿಪ್ಸ್…

ದಿನ ಕಳೆದಂತೆ ಬೇಸಿಗೆಯ ಬೇಗೆ ಹೆಚ್ಚುತ್ತಿದೆ. ಬೇಸಿಗೆ ಆರಂಭದಲ್ಲೇ ಜನ ಹೈರಾಣಾಗಿ ಹೋಗಿದ್ದಾರೆ. ಅಲ್ಲದೇ ತಾಪಮಾನ ಬದಲಾವಣೆಯಿಂದ ಜನರು ಹಲವಾರು ಕಾಯಿಲೆಗಳಿಗೆ ಕೂಡ ಒಳಗಾಗುತ್ತಾರೆ. ಅವುಗಳಿಂದ ದೂರ ಉಳಿಯಲು ಇಲ್ಲಿದೆ ಕೆಲವು ಟಿಪ್ಸ್…

ಬೇಸಿಗೆಯಲ್ಲಿ ಸಮ್ಮರ್ ಸ್ಟ್ರೋಕ್ ಸಂಖ್ಯೆ ಗಣನೀಯವಾಗಿ ಹೆಚ್ಚಾಗ್ತಾವೆ. ಬೇಸಿಗೆಯಾಗಿರುವುದರಿಂದ ದೇಹದಲ್ಲಿರುವ ನೀರು ಬೆವರಿನ ಮುಖಾಂತರ ಅಧಿಕವಾಗಿ ಪೋಲಾಗುತ್ತೆ. ಅಲ್ಲದೆ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ತಪ್ಪಿಸಿಕೊಳ್ಳಲು ಪ್ರತಿ ಗಂಟೆಗೊಮ್ಮೆ ಸ್ವಲ್ಪ ನೀರು ಅಥವಾ ಜ್ಯೂಸ್ ಸೇವನೆ ಅಗತ್ಯ. ಕ್ಯಾರೆಟ್, ಸೌತೆಕಾಯಿ, ಕಲ್ಲಂಗಡಿ, ಕರಬೂಜ ಇತ್ಯಾದಿ ದ್ರವಾಂಶ ಹೆಚ್ಚಾಗಿ ಕಂಡುಬರುವ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಸುಡುವ ಬಿಸಿಲಿನಲ್ಲಿ ನಿಮ್ಮ ಚರ್ಮ ರಕ್ಷಣೆ ಬಗ್ಗೆ ಕಾಳಜಿ ವಹಿಸಲೇಬೇಕು. ಇಲ್ಲದಿದ್ದರೆ ಸನ್ ಟ್ಯಾನ್ ಅಥವಾ ಸನ್ ಬರ್ನ್ ಕೂಡ ಆಗಬಹುದು. ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಆರೋಗ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ.

ಬಿಸಿಲಿನಿಂದ ರಕ್ಷಣೆ ಹೇಗೆ..?
1. ಬೆಳಗ್ಗೆ 10ರಿಂದ ಸಂಜೆ 4ರವರೆಗು ಬಿಸಿಲಿಗೆ ಮೈ ಒಡ್ಡುವುದು ಸೂಕ್ತವಲ್ಲ
2. ಪೂರ್ಣ ತೋಳಿನ ಕಾಟನ್ ಬಟ್ಟೆ ಬಳಕೆಯೇ ಉತ್ತಮ
3. ವಿಟಮಿನ್ ಸಿ ಅಧಿಕವಾಗಿ ಇರುವ ಫಲಗಳ ಸೇವನೆ
4. ದಿನಕ್ಕೆ ಕನಿಷ್ಠ 5 ಲೀಟರ್ ನೀರು ಸೇವನೆ
5. ಎಣ್ಣೆ ಪದಾರ್ಥವನ್ನು ಆದಷ್ಟೂ ಸೇವಿಸದೇ ಇರುವುದು

ಬಿಗು ಬಿಸಿಲಿನಲ್ಲಿ ಆಹಾರ ಪದ್ದತಿ ಹೇಗಿರಬೇಕು..?
1. ಹೆಚ್ಚು ಹೆಚ್ಚು ನೀರು ಕುಡಿಯಬೇಕು.
2. ಉಷ್ಣ ಪದಾರ್ಥಗಳಿಂದ ದೂರವಿರಬೇಕು.
3. ಎಣ್ಣೆ ಪದಾರ್ಥಗಳಿಂದ ದೂರವಿರಿ
4. ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.
5. ಕ್ಯಾರೆಟ್​ ಮತ್ತು ಪಪ್ಪಾಯ ಸೇವನೆ ಆರೋಗ್ಯಕರ

Leave a Reply

Your email address will not be published.

Social Media Auto Publish Powered By : XYZScripts.com