Film news : Box office ಬ್ಲಾಕ್​ಬಸ್ಟರ್​ KGF ಚಾಪ್ಟರ್ 1 ಶೀಘ್ರದಲ್ಲಿ ಟಿವಿಯಲ್ಲಿ…!

50 ದಿನದತ್ತ ಸಾಗುತ್ತಿರುವಾತ್ತಿರುವ ‘ಕೆಜಿಎಫ್ ಚಾಪ್ಟರ್ 1‘ ಬ್ಲಾಕ್​ಬಸ್ಟರ್​ ಸಿನಿಮಾ ಈಗ ಟಿವಿಯಲ್ಲಿ ಪ್ರಸಾರವಾಗೊದು ನಿಜಕ್ಕೂ ಅಚ್ಚರಿಯೇ ಸರಿ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿ, ಕಲೆಕ್ಷನ್‌ನಲ್ಲಿ ಭಾರಿ ಗಳಿಕೆ ಕಂಡಿದ್ದ ಕೆಜಿಎಫ್ ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹೊಸ ದಾಖಲೆಗಳನ್ನ ನಿರ್ಮಿಸಿತ್ತು.

ಹೌದು, 100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಕೆಜಿಎಫ್ ಚಾಪ್ಟರ್ 1’ ಚಿತ್ರವನ್ನು ಮನೆಯಲ್ಲೇ ಕುಳಿತು ನೋಡಬಹುದು. ಆದರೆ, ಟಿವಿಯಲ್ಲಿ ಪ್ರಸಾರವಾಗ್ತಿರೋದು ಕನ್ನಡದಲ್ಲಲ್ಲ, ಹಿಂದಿ ಭಾಷೆಯಲ್ಲಿ ಪ್ರಸಾರವಾಗಲಿದೆ. ಕೆಜಿಎಫ್​ನ ಹಿಂದಿ ವರ್ಷನ್​ ಸೋನಿ ಮ್ಯಾಕ್ಸ್​ನಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗುವ ನಿರೀಕ್ಷೆ ಇದೆ.

ಸಿನಿಮಾ ರಿಲೀಸ್​ ಆಗಿ ಇನ್ನೂ 100 ದಿನ ಕೂಡ ಕಂಪ್ಲೀಟ್​ ಆಗಿಲ್ಲ, ಆದ್ರೆ ಅದಾಗ್ಲೆ ವರ್ಲ್ಡ್ ಟೆಲಿವಿಷನ್​ ಪ್ರೀಮಿಯರ್​ ಆಗುತ್ತಿದೆ.

ದೊಡ್ಡ ಬೆಲೆಗೆ ಸೋನಿ ಮ್ಯಾಕ್ಸ್‌ಗೆ ಸೇಲ್ ಆಗಿರುವ ಕೆಜಿಎಫ್ ಸಿನಿಮಾ ಈಗಾಗಲೇ ಸಿನಿಮಾದ ಪ್ರೋಮೋ ಟೆಲಿಕಾಸ್ಟ್ ಮಾಡುತ್ತಿರುವ ಸೋನಿ ಟಿವಿವಾಹಿನಿ, ಅತಿ ಶೀಘ್ರದಲ್ಲಿ ಎಂದು ಜಾಹೀರಾತು ನೀಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಫೆಬ್ರವರಿಯಲ್ಲಿ ಸಿನಿಮಾ ಪ್ರದರ್ಶನವಾಗುವ ನಿರೀಕ್ಷೆಯಲ್ಲಿದೆ.

ಹಿಂದಿಯ ಖ್ಯಾತ ನಟ ಫರ್ಹಾನ್ ಅಖ್ತರ್ ಹಾಗೂ ಅನಿಲ್ ಥಡಾನಿ ಅವರು ಸಿನಿಮಾದ ವಿತರಣಾ ಹಕ್ಕನ್ನು ಪಡೆದಿದ್ದು, ಸುಮಾರು 50 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಕನ್ನಡದ ಸಿನಿಮಾ ಬಾಲಿವುಡ್‌ನಲ್ಲಿ ಮಾಡಿರದ ದೊಡ್ಡ ದಾಖಲೆ.

Leave a Reply

Your email address will not be published.

Social Media Auto Publish Powered By : XYZScripts.com