ದಕ್ಷಿಣ ಚೀನಾದಲ್ಲಿ ಘಟನೆ : ಕಂಬಿಯಲ್ಲಿ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ವಿಡಿಯೊ ವೈರಲ್…

ದಕ್ಷಿಣ ಚೀನಾದಲ್ಲಿ ಬಾಲಕಿಯೊಬ್ಬಳು ಆಯಾತಪ್ಪಿ ಮೂರನೇ ಮಹಡಿಯಿಂದ ಬಿದ್ದಿದ್ದು, ಸ್ಥಳದಲ್ಲಿದ್ದ ಇಬ್ಬರು ಯುವಕರ ಸಮಯಪ್ರಜ್ಞೆಯಿಂದ ಬಾಲಕಿಯ ಜೀವ ಉಳಿದಿದೆ.

ದಕ್ಷಿಣ ಚೀನಾದಲ್ಲಿ ನಡೆದಿರುವ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೂರನೇ ಮಹಡಿಯಿಂದ ಬಿದ್ದಿರುವ ಅಪರಿಚಿತ ಬಾಲಕಿಯನ್ನು ಉಳಿಸಲು, ಯುವಕರು ಗೋಡೆ ಹತ್ತಿ, ಕಂಬಿಗೆ ಸಿಕ್ಕಿ ಹಾಕಿಕೊಂಡಿದ್ದ ಬಾಲಕಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಬಾಲಕಿಯ ಜೀವ ಉಳಿಸಿದ ಈ ಇಬ್ಬರು ಯುವಕರು ಸಾಮಾಜಿಕ ಜಾಲತಾಣದಲ್ಲಿ ಹಿರೋಗಳಾಗಿದ್ದಾರೆ.

ಸ್ಥಳೀಯರ ಪ್ರಕಾರ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಈ ಬಾಲಕಿ, ಆಯತಪ್ಪಿ ಬಾಲ್ಕನಿಯಿಂದ ಬಿದ್ದಿದ್ದಾಳೆ. ಆದರೆ ನೆಲಕ್ಕೆ ಬೀಳದೇ, ಮೊದಲ ಅಂತಸ್ತಿನಲ್ಲಿ ಅಳವಡಿಸಿದ್ದ ಕಂಬಿಗಳಿಗೆ ಆಕೆಯ ಕುತ್ತಿಗೆ ಸಿಕ್ಕಿ ಹಾಕಿಕೊಂಡಿದೆ. ಆದ್ದರಿಂದ ಉಸಿರಾಟದ ತೊಂದರೆ ಹಾಗೂ ಕುತ್ತಿಗೆಯ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ನೋಡಿ ಈ ಇಬ್ಬರು ಯುವಕರು ರಕ್ಷಿಸಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com