Indian railway ಆನ್‌ಲೈನ್ ಬುಕಿಂಗ್ ವಂಚನೆ ತಡೆಯಲು ಹೊಸ ಮಾರ್ಗ

ದೇಶದ ಅತಿದೊಡ್ಡ ಸಾರಿಗೆ ಜಾಲವಾಗಿರುವ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಆನ್‌ಲೈನ್ ಬುಕಿಂಗ್ ವಂಚನೆಯನ್ನು ತಪ್ಪಿಸಲು ಕೇಂದ್ರ ರೈಲ್ವೆ ಇಲಾಖೆ ವಿಶೇಷ ಸೈಬರ್ ಕ್ರೈಂ ವಿಭಾಗವನ್ನು ಆರಂಭಿಸಲು ಮುಂದಾಗಿದೆ.

ಹಲವು ವೆಬ್‌ಸೈಟ್‌ಗಳು ತಂತ್ರಜ್ಞಾನವನ್ನು ಬಳಸಿಕೊಂಡು ಟಿಕೆಟ್‌ಗಳನ್ನು ಬ್ಲಾಕ್ ಮಾಡುವುದು ಗಮನಕ್ಕೆ ಬಂದಿರುವುದರಿಂದ, ಈ ಅವ್ಯವಹಾರವನ್ನು ತಡೆಯಲು ವಿಶೇಷ ಸೈಬರ್ ಘಟಕವನ್ನು ಸ್ಥಾಪಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಿದೆ.

ತಜ್ಞರ ಸಮಿತಿ ವರದಿ ನೀಡಿದ ಬಳಿಕ ಸೈಬರ್ ಕ್ರೈಂ ವಿಭಾಗವನ್ನು ಸ್ಥಾಪಿಸಲಾಗುವುದು. ಈ ಘಟಕದಲ್ಲಿ ಆನ್‌ಲೈನ್ ಟಿಕೆಟ್ ವಂಚನೆ ತಪ್ಪಿಸಲು ಇಲಾಖೆ ತಗೆದುಕೊಳ್ಳಬೇಕಿರುವ ಕ್ರಮದ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಸಮಿತಿಯಲ್ಲಿ ಪ್ರಮುಖವಾಗಿ ಸಿಗ್ನಲ್ ಹಾಗೂ ಟೆಲಿಕಾಂ, ಮಾಹಿತಿ ತಂತ್ರಜ್ಞಾನ, ರಕ್ಷಣಾ ವಿಭಾಗ ಸೇರಿದಂತೆ ಒಟ್ಟು ಆರು ವಿಭಾಗದ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಸಮಿತಿಯೂ ಸೈಬರ್ ಕ್ರೈಂ ವಿಭಾಗವನ್ನು ಸ್ಥಾಪಿಸುವ ಬಗ್ಗೆ ನೀಲನಕ್ಷೆ ತಯಾರಿಸಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com