Social Media : ತಾಯಿ ಎಸೆದ ಚಪ್ಪಲಿ ಮಗಳಿಗೆ ಬಿದ್ದ ವಿಡಿಯೊ ವೈರಲ್….watch video

ಕೆಲವೊಮ್ಮೆ ಮಕ್ಕಳು ಮಾಡುವ ಎಡವಟ್ಟಿಗೆ ತಾಯಂದರೂ ಯಾವೆಲ್ಲ ರೀತಿ ಶಿಕ್ಷೆ ನೀಡುತ್ತಾರೆ ಎಂದು ನೋಡಿರುತ್ತೀರಾ. ಆದರೆ ಇಲ್ಲೊಬ್ಬ ತಾಯಿ, ಓಡಿಹೋಗುತ್ತಿದ್ದ ಮಗಳನ್ನು ಹಿಡಿಯಲು ಎಸೆದ ಚಪ್ಪಲಿಯ ವಿಡಿಯೊ ವೈರಲ್ ಆಗಿದೆ.

ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಅಮ್ಮ ಮಗಳ ನಡುವೆ ಯಾವುದೋ ವಿಷಯಕ್ಕೆ ಜಗಳ ಆರಂಭವಾಗಿದ್ದ, ಬಳಿಕ ಅದು ಬೀದಿಗೆ ಬಂದಿದೆ. ಈ ವೇಳೆ ತಾಯಿಯಿಂದ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದ ಮಗಳನ್ನು ಹಿಡಿಯಲು ಕಾಲಿನಲ್ಲಿದ್ದ ಚಪ್ಪಲಿಯನ್ನು ತೋರಿದ್ದಾರೆ. ಅದು ನೇರವಾಗಿ ಮಗಳಿಗೆ ಬಿದ್ದಿದ್ದು, ಈ ಗುರಿಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

ಇನ್ನು ಚಪ್ಪಲಿ ಏಟಿಗೆ ಮಗಳು ಬೀಳುತ್ತಿದ್ದಂತೆ ತಾಯಿ ಹಾಗೂ ಜತೆಗಿದ್ದವರೂ ಜೋರಾಗಿ ನಗಲು ಆರಂಭಿಸಿದ್ದಾರೆ. ಯೂಟ್ಯೂಬ್ ನಲ್ಲಿ ಹಾಕಿರುವ ವಿಡಿಯೊವನ್ನು 1.6 ಮಿಲಿಯನ್ ಮಂದಿ ವೀಕ್ಷಿಸಿದ್ದು, ಫೇಸ್ಬುಕ್, ಟ್ವೀಟರ್‌ನಲ್ಲಿ ಈ ವಿಡಿಯೊ ಭಾರಿ ಸದ್ದು ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com