ಬಿಗ್ ಬಾಸ್ ಸೀಸನ್ 6 ‘ವಿನ್ನರ್’ ಶಶಿಕುಮಾರ್ ಗೆಲ್ಲಲು ಇಲ್ಲಿದೆ ಕೆಲ ಕಾರಣಗಳು..

ಬಿಗ್ ಬಾಸ್ ಸೀಸನ್ 6ರಲ್ಲಿ ಶ್ರೀಸಾಮಾನ್ಯನ ವಿಭಾಗದಲ್ಲಿ ಬಿಗ್ ಬಾಸ್ ಮನೆಗೆ ಅಡಿಯಿಟ್ಟ ಸ್ಪರ್ಧಿ ಶಶಿಕುಮಾರ್.  ಜನವರಿ 27 2019ರಂದು ನಡೆದ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -6ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಹೌದು.. ‘ ಬಿಗ್ ಬಾಸ್ ಸೀಸನ್ – 6 ನಲ್ಲಿ ರೈತ ಹುಡುಗ ಶಶಿಕುಮಾರ್ ವಿನ್ನರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ನಿರೂಪಕ ಕಿಚ್ಚ ಸುದೀಪ್ ಅವರು ಈಗತಾನೇ ಕಲರ್ ಸೂಪರ್ಸ್ ರಿಯಾಲಿಟಿ ಶೋನ ಬಿಗ್ ಬಾಸ್ 6ನೇ ಅವೃತ್ತಿಯ ‘ಫಲಿತಾಂಶ’ ಘೋಷಿಸಿದರು. ಈ ಮೂಲಕ ಶಶಿ ಕುಮಾರ್ ಅವರು ಬಿಗ್ ಬಾಸ್ ಬಹುಮಾನ ಮೊತ್ತ 50 ಲಕ್ಷ ರೂಪಾಯಿಗಳನ್ನು ತಮ್ಮದಾಗಿಸಿಕೊಂಡರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಇವರ ಸ್ವಂತ ಊರು. ಆಧುನಿಕ ರೈತನಾಗಿರುವ ಇವರು ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಿಗೂ ಶಶಿಗೂ ಇರುವ ವ್ಯತ್ಯಾಸಗಳು ಏನಿರಬಹುದು..? ಶಶಿ ಗೆಲ್ಲಲು ಒಂದಿಷ್ಟು ಕಾರಣಗಳನ್ನ ನೋಡೋಣ..

1) ಯಾವುದೇ ಮನಸ್ಥಾಪವನ್ನು ಬೇಸರವಿಲ್ಲದೇ, ಅಹಂ ಇಲ್ಲದೇ ತಾವೇ ಸ್ವತ: ಸ್ಪಷ್ಟೀಕರಣ ನೀಡಿ ಬೆರೆಯುವ ವ್ಯಕ್ತಿ

2) ಮನೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು ಶಶಿ

3) ಆಂಡಿ ಮಾಡಿದ ಕಿರಿಕಿರಿಗೆ ತಮಗೆ ತಾವೇ ಕೈ ಗೋಡೆ ಹೊಡೆದುಕೊಳ್ಳುವ ಮೂಲಕ ದಂಡಿಸಿಕೊಂಡರು..

4) ಕಣ್ಣಿಗೆ ಸ್ಪ್ರೇ ಮಾಡಿದಾಗ ಮನೆಯ ಎಲ್ಲ ಸದಸ್ಯರಿಗೂ ಆಂಡಿ ಮೇಲೆ ಕೋಪ ಬಂತು. ಕೆಲವರು ಕೆಟ್ಟದಾಗಿ ಮಾತನಾಡಿದರು, ಕೆಲವರು ಅತ್ತು ಸುಮ್ಮನಿದ್ದರು, ಆದರೆ ಯಾರೂ ಕೂಡ ಕೈ ಮುಗಿದು ಬೇಡಿಕೊಳ್ಳುವ ಮಟ್ಟಕ್ಕೆ ಹೋಗಲಿಲ್ಲ. ಆದರೆ ಶಶಿಗೆ ಆಂಡಿ ಕಿರಿಕಿರಿ ಮಾಡಿದರೂ ಶಶಿ ಕೈ ಮುಗಿದು ಅಡ್ಡಬಿದ್ದು ಕಿರಿಕಿರಿ ಮಾಡದಂತೆ ಕೇಳಿಕೊಂಡರು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಹೈಲೆಟ್ ಆಗಿತ್ತು.

5) ಕೈಗೆ ಬ್ಯಾಂಡೇಜ್ ಹಾಕಿಕೊಂಡರೂ ಆಟದಲ್ಲಿ ಹಿಂಜರಿಯಲಿಲ್ಲಾ ಶಶಿ..

6) ಸಣ್ಣ ಪುಟ್ಟ ಜಗಳು ಬಂದರೂ ಸ್ಪಷ್ಟನೆ ನೀಡಿ ರಾಜಿ ಮಾಡಿಕೊಳ್ಳುತ್ತಿದ್ದರು

ಶಶಿಕುಮಾರ್ ಬಿಗ್ ಬಾಸ್ ಮನೆಯಲ್ಲಿ ತುಂಬಾ ಸೆನ್ಸಿಬಲ್ ಸ್ಪರ್ಧಿ ಎಂದೇ ಹೆಸರಾದವರು. ಯಾವ ಜಗಳ, ತರಲೆ- ಕೀಟಲೆಗಳಿಲ್ಲದೇ ಪಕ್ಕಾ ಸಿಂಪಲ್ ಬಾಯ್ ಎನ್ನುವಂತಿದ್ದ ಶಶಿಕುಮಾರ್ ಇಂದು ಕರ್ನಾಟಕವೇ ಅಚ್ಚರಿಯಿಂದ ತಲೆ ಎತ್ತಿ ನೋಡುವಂತೆ ಮಾಡಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com