ಭೂಕುಸಿತದಿಂದ ಮದುವೆ ಸಂಭ್ರಮದಲ್ಲಿದ್ದವರು ಮಸಣ ಸೇರಿದರು…

ಮದುವೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ಮೇಲೆ ಭೂಕುಸಿತ ಉಂಟಾಗಿ ಹದಿನೈದು ಮಂದಿ ಪ್ರಾಣ ಕಳೆದುಕೊಂಡ ಘಟನೆ ಪೆರುವಿನಲ್ಲಿ ನಡೆದಿದೆ.

ಲಿಮಾ ಎಂಬ ಊರಿನ ಹೊಟೇಲ್ ಒಂದರಲ್ಲಿ ವಿವಾಹ ಸಂಭ್ರಮಾಚರಣೆ ನಡೆದಿತ್ತು. ನೂರಕ್ಕೂ ಹೆಚ್ಚು ಮಂದಿ ಅಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹೋಟೆಲ್ಗೆ ತಾಗಿಕೊಂಡಿದ್ದ ಗುಡ್ಡ ಕುಸಿದಿದೆ.

ಗುಡ್ಡ ಹಾಗೂ ಹೋಟೆಲ್ ನಡುವೆ ನಿರ್ಮಿಸಲಾಗಿದ್ದ ತಡೆಗೋಡೆ ಧರಾಶಾಯಿಯಾಗಿದ್ದು, ಹೋಟೆಲ್ ಚಾವಣಿಗೂ ಹಾನಿಯಾಗಿದೆ. ಇದರಿಂದ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಹನ್ನೊಂದು ಮಹಿಳೆಯರು ನಾಲ್ವರು ಪುರುಷರು ಮೃತಪಟ್ಟಿದ್ದು ಮೂವತ್ತು ಆರು ಮಂದಿ ಗಾಯಾಳುಗಳಾಗಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳ ಪೊಲೀಸರು ಸ್ಥಳಕ್ಕಾಗಮಿಸಿ ಪರಿಹಾರ ಕಾರ್ಯದಲ್ಲಿ ನಿರತರಾದರು.

Leave a Reply

Your email address will not be published.