Student Hoax Bomb : ವಿದ್ಯಾರ್ಥಿಯ ಎಡವಟ್ಟಿನಿಂದ ಜೈಲು ಪಾಲು …

ವಿದ್ಯಾರ್ಥಿಯನ್ನು ನೋಡಲು ದೂರದ ಊರಿನಿಂದ ಪೋಷಕರು ಬರುತ್ತಿರುವುದು ತಪ್ಪಿಸಲು ಹುಸಿ ಬಾಂಬ್ ಕರೆ ಮಾಡಿ, ಇದೀಗ ಪೊಲೀಸರ ವಶದಲ್ಲಿದ್ದಾನೆ.

ಈ ಘಟನೆ ಫ್ರಾನ್ಸ್‌ ನ ರೆನಿಸ್ ನಲ್ಲಿ ಘಟನೆ ನಡೆದಿದ್ದು, ಸದ್ಯ ವಿದ್ಯಾರ್ಥಿ ಪೊಲೀಸರ ವಶದಲ್ಲಿದ್ದಾನೆ. ಜ.18ರಂದು ವಿದ್ಯಾರ್ಥಿಯನ್ನು ನೋಡಲು ಫ್ರಾನ್ಸ್‌ ನ ಲಿಯಾನ್ ನಿಂದ ರೆನಿಸ್‌ಗಸೆ, ಆತನ ಪೋಷಕರು ಪ್ರಯಾಣಿಸುತ್ತಿದರು. ಇದನ್ನು ತಪ್ಪಿಸಲು ವಿಮಾನದಲ್ಲಿ ಬಾಂಬ್ ಯಿದೆ ಎಂದು ಪೊಲೀಸರಿಗೆ ಕರೆ ಮಾಡಿ ಹೇಳಿದ್ದಾನೆ.

ಕೂಡಲೇ ವಿಮಾನವನ್ನು ಲ್ಯಾಂಡ್ ಮಾಡಿ ಪರಿಶೀಲನೆ ನಡೆಸಿದಾಗ, ಇದೊಂದು ಹುಸಿಬಾಂಬ್ ಕರೆ ಎಂದು ಪೊಲೀಸರಿಗೆ ಖಚಿತವಾಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ ವಿದ್ಯಾರ್ಥಿಯ ಸುಳ್ಳು ಬಯಲಾಗಿದ್ದು, ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹುಸಿಬಾಂಬ್ ಕರೆಯಿಂದ ಆಗಿರುವ ಅವಾಂತರವನ್ನು ಈಸಿಜೆಟ್ ವಕ್ತಾರ ಒಪ್ಪಿಕೊಂಡಿದ್ದಾರೆ. ರೆನಿಸ್ ಸರಕಾರಿ ವಕೀಲರ ಪ್ರಕಾರ, ಈ ಎಡವಟ್ಟಿಗೆ ಭಾರಿ ಬೆಲೆ ತೆರಬೇಕಾಗುತ್ತದೆ. ಕಾನೂನಿನಲ್ಲಿ ಐದು ವರ್ಷ ಜೈಲು ಅಥವಾ 85 ಸಾವಿರ ಡಾಲರ್ ದಂಡಕ್ಕೆ ಅವಕಾಶವಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com