ನೇಪಾಳಕ್ಕೆ ಭಾರತದಿಂದ ಮತ್ತೆ ನೆರವು – 30 ಆ್ಯಂಬುಲೆನ್ಸ್ ಹಾಗೂ 6 ಬಸ್ಸು ವಿತರಣೆ..

ನೇಪಾಳದ “ಸಮೃದ್ಧ ನೇಪಾಳ, ನೇಪಾಳಿ” ಎಂಬ ಆಶಯಕ್ಕೆ ಮೊದಲಿನಿಂದಲೂ ನೆರವಾಗುತ್ತಲೇ ಬಂದಿರುವ ಭಾರತ, ಇದೀಗ ಮತ್ತಷ್ಟು ಸಹಾಯ ಮಾಡಿದೆ. ಜ. 26ರಂದು ನೇಪಾಳಕ್ಕೆ 30 ಆ್ಯಂಬುಲೆನ್ಸ್ ಹಾಗೂ 6 ಬಸ್ಸುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಭಾರತ 70ನೇ ಗಣರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದೆ.

ನೇಪಾಳದ ಕಠ್ಮಂಡುವಿನಲ್ಲಿರುವ ರಾಯಭಾರ ಕಚೇರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನೇಪಾಳದಲ್ಲಿರುವ ಭಾರತದ ರಾಯಭಾರಿ ಮಂಜೀವ್ ಸಿಂಗ್ ಪುರಿ ಅಲ್ಲಿನ ವಿವಿದ ಸಂಘ-ಸಂಸ್ಥೆಗಳಿಗೆ ಕೀಗಳನ್ನು ಹಸ್ತಾಂತರಿಸುವ ಮೂಲಕ ಈ ವಾಹನಗಳನ್ನು ಕೊಡುಗೆಯಾಗಿ ನೀಡಿದರು. ನೇಪಾಳಕ್ಕೆ ಭಾರತದ ಈ ಸಹಾಯ 1994ರಲ್ಲೇ ಆರಂಭಗೊಂಡಿದ್ದು ಇದುವರೆಗೆ 722 ಆ್ಯಂಬುಲೆನ್ಸ್ ಮತ್ತು 142 ಬಸ್‍ಗಳನ್ನು ನೀಡಲಾಗಿದೆ. ಆ ಮೂಲಕ ಅಲ್ಲಿನ ಆರೋಗ್ಯ-ಶಿಕ್ಷಣ ಸೇವೆಗೆ ಭಾರತ ಸಾಕಷ್ಟು ಸಹಾಯ ಮಾಡಿದೆ. ಇದೇ ಸಂದರ್ಭದಲ್ಲಿ ಗೂರ್ಖಾ ರೆಜಿಮೆಂಟ್‍ನ ಹುತಾತ್ಮರ ಮಕ್ಕಳಿಗೆ ಹಣ, 53 ಶಾಲೆಗಳ ಲೈಬ್ರರಿಗಳಿಗೆ ಪುಸ್ತಕಗಳನ್ನು ಮಂಜೀವ್ ಸಿಂಗ್ ನೀಡಿದರು.

Leave a Reply

Your email address will not be published.

Social Media Auto Publish Powered By : XYZScripts.com