ಆದಮ್ ಹೇಳಿದ ಸತ್ಯಕ್ಕೆ ರಶ್ಮಿ ಗರಂ : ಸಿಂಕ್ ಉಜ್ಜಿದ ಬ್ರೆಶ್ ನಲ್ಲಿ ಹಲ್ಲು ಉಜ್ಜಿದ್ದು ನಾನು..!

ಬಿಗ್ ಬಾಸ್ ಸೀಸನ್  6 ಕನ್ನಡ ಫಿನಾಲೆಗೆ ತಲುಪಿದೆ. ಐದು ಜನ ಸ್ಪರ್ಧಿಗಳು ಫಿನಾಲೆಯಲ್ಲಿದ್ದಾರೆ. ಈ ನಡುವೆಯೂ ಕೆಲ ಸತ್ಯಗಳು, ಸುಳ್ಳಗಳ ಸವಿ ಸವಿ ನೆನಪನ್ನ ನೆನೆದುಕೊಳ್ಳಲು ಬಿಗ್ ಬಾಸ್ ಮನೆಗೆ ಹಿಂದೆ ಇದ್ದ ಸ್ಪರ್ಧಿಗಳು ಆಗಮಿಸಿದ್ದಾರೆ. ಈ ವೇಳೆ ಪ್ರತೀಯೊಬ್ಬ ಹಳೆಯ ಸ್ಪರ್ಧಿಗಳು ಹಾಗೂ ಫೈನಲಿಸ್ಟ್ ಗಳು ಕೂಡ ತಮಗೆ ಇಷ್ಟವಾದ ಗಳಿಗೆಯನ್ನು ಎಲ್ಲರಮುಂದೆ ಹಂಚಿಕೊಳ್ಳಬೇಕು.

ಈ ಸವಿ ಸವಿ ನೆನಪು ಹಂಚಿಕೊಳ್ಳುವುದರಲ್ಲಿ ಆದಮ್ ಒಂದು ಸತ್ಯವನ್ನು ಹೇಳಿದ್ರು. ಅದುವೇ ರಶ್ಮಿ ಬ್ರೆಶ್ ಚೇಂಜ್ ಮಾಡಿದ ವಿಚಾರ. ಆದಮ್ ರಶ್ಮಿ ಯ್ಯೂಸ್ ಮಾಡುತ್ತಿದ್ದ ಬ್ರೆಶ್ ನ್ನು ಚೇಂಜ್ ಮಾಡಿ ಸಿಂಕ್ ಉಜ್ಜಿದ ಬ್ರೆಶ್ ನ್ನ ರೀಪ್ಲೇಸ್ ಮಾಡಿದ್ರಂತೆ.. ಅದಕ್ಕೆ ಆದಮ್ ರಶ್ಮಿಗೆ ಸಾರಿ ಕೇಳಿದ್ರು. ಆದರೆ ಇದಕ್ಕೆ ಕೋಪಿಸಿಕೊಂಡ ರಶ್ಮಿ ನೇರವಾಗಿ ಆಂಡಿ ಮತ್ತು ಆದಮ್ ವಿರುದ್ಧ ಸಿಡಿದೆದ್ರು. ಆದಮ್ ನನ್ನಾ ಬ್ರೆಶ್ ಚೇಂಜ್ ಮಾಡಿದ ವಿಚಾರ ಆಂಡಿಗೆ ತಿಳಿದಿತ್ತು ಆದರೂ ಆಂಡಿ ಮುಚ್ಚಿಟ್ಟಿದ್ರು. ಇದು ಅವರವರ ವ್ಯಕ್ತಿತ್ವವನ್ನು ತೋರಿಸುತ್ತೆ, ಇದನ್ನೆಲ್ಲಾ ಜನ ನೋಡ್ತಾಯಿರುತ್ತಾರೆ ಎಂದು ರಶ್ಮಿ ಬೇಸರ ವ್ಯಕ್ತಪಡಿಸಿದರು.

ಹೀಗಾಗಿ ಆದಮ್ ಹೇಳಿದ ಸತ್ಯಕ್ಕೆ ಖುಷಿ ಪಡಬೇಕಾ..? ಇಲ್ಲಾ ರಶ್ಮಿ ಕೋಪ ಮಾಡಿಕೊಂಡಿದ್ದಕ್ಕೆ ಸರಿ ಎನ್ನಬೇಕಾ..? ಒಂದು ವೇಳೆ ಆದಮ್ ಈ ವಿಚಾರ ಹೇಳದೇ ಹೋಗಿದ್ದರೆ ರಶ್ಮಿ ಗೆ ವಿಚಾರವೇ ಗೊತ್ತಾಗುತ್ತಿರಲಿಲ್ಲ. ಏನೇ ಆಗಲಿ ಆಂಡಿ ಮತ್ತು ಆದಮ್ ಮಾಡಿದ್ದು ತಪ್ಪೇ ಅಲ್ವಾ..?

 

 

Leave a Reply

Your email address will not be published.

Social Media Auto Publish Powered By : XYZScripts.com