ಬಿಗ್ ಬಾಸ್ ಮನೆಯಲ್ಲಿ ಸವಿ ಸವಿ ನೆನಪು : ಸೋನು ಕಣ್ಣೀರಿಗೆ ಸೋಲ್ತಾನಾ ನವೀನ್..?

ಬಿಗ್ ಬಾಸ್ ಫೈನಲಿಸ್ಟ್ ಗಳಾದ ನವೀನ್, ಆಂಡಿ, ಶಶಿ, ಕವಿತಾ ಮತ್ತು ರಶ್ಮಿ ಅವರಿಗೆ ಬಿಗ್ ಬಾಸ್ ಶಾಕ್ ನೀಡಿದ್ದು ಸವಿ ಸವಿ ನೆನಪು ಮೂಲಕ. ಹೌದು.. ನಿನ್ನೆ ಬಿಗ್ ಬಾಸ್ ಮನೆಗೆ ಹಳೆಯ ಸ್ಪರ್ಧಿಗಳಾದ ಸೋನು, ಅಕ್ಷತಾ, ರಾಕೇಶ್, ಮುರಳಿ, ರವಿ, ಧನರಾಜ್, ನಯನ, ಆದಮ್ ಎಲ್ಲರೂ ಕೂಡ ಆಗಮಿಸಿ ಸವಿ ಸವಿ ನೆನಪು ಶೇರ್ ಮಾಡಿಕೊಂಡರು.

ಈ ನಡುವೆ ಅಧಿಕ ಬಾತ್ ರೂಮ್ ಪ್ರೀಯನಾದ ನವೀನ್ ನನ್ನ ನೋಡಲು ಸೋನು ಆತೊರೆದಿದ್ದು ಅಷ್ಟಿಷ್ಟಲ್ಲಾ. ಮನೆಗೆ ಆಗಮಿಸುತ್ತಿದ್ದ ಹಾಗೆ ಸೋನು ಕೇಳಿದ್ದು ಮೊದಲು ನವೀನ್ ಎಲ್ಲಿ ಅಂತ..? ಆನಂತರ ಹುಡುಕಾಡಿದ್ದೂ ನವೀನ್ ಅವರನ್ನೇ. ಹೀಗಾಗಿ ಬಿಗ್ ಬಾಸ್ ಮನೆಗೆ ಬಂದ ಹಳೆಯ ಸ್ಪರ್ಧಿಗಳು ನವೀನ್ ಮತ್ತು ಸೋನು ಅವರನ್ನು ಕಾಡಿಸಲು ಶುರುಮಾಡಿದರು.. ಇದಕ್ಕೆ ನವೀನ್ ‘ನಾನು ತುಂಬಾ ಭಾವುಕ ಜೀವಿ. ಮನಸ್ಸಿಂದ ಹಚ್ಚಿಕೊಂಡ್ರೆ ಅದ್ಯಾರೇ ಆಗಲಿ ನಾನು ದೂರ ಆಗೋದನ್ನ ಸಹಿಸೋದಿಲ್ಲ. ಕೇಳಿದ್ದನ್ನ ಕೊಟ್ಟುಬಿಡ್ತೀನಿ.. ಹಾಗೆ ನಿನಗೂ ಜಾಕೇಟ್ ಕೇಳಿದ್ದಕ್ಕೆ ನಾನು ಕೊಟ್ಟಿದ್ದು. ಅದ್ರಲ್ಲಿ ತಪ್ಪೇನು ಇಲ್ಲ. ನೀನ್ಯಾಕ್ ಅದನ್ನ ದೊಡ್ಡದ್ ಮಾಡ್ತಾಯಿದಿಯಾ ಗೊತ್ತಿಲ್ಲಾ..?’ ಎಂದು ಸೋನು ಮೇಲೆ ನವೀನ್ ರೇಗಾಡಿದರು. ಹೀಗಾಗಿ ಸೋನು ಬೇಸರಗೊಂಡು ಕಣ್ಣೀರಿಟ್ರು.

ಇನ್ನೂ ನವೀನ್ ಹಾಡಿಗೆ ಹೆಜ್ಜೆ ಹಾಕಿದ ಮನೆಯ ಸದಸ್ಯರು ಎಲ್ಲರೊಂದಿಗೆ ಬೆರೆತು ಸಂತೋಷಗೊಂಡು ಎಂಜಾಯ್ ಮಾಡಿದರೆ, ಸೋನು ಮಾತ್ರ ಒಬ್ಬೊಂಟಿಯಾಗಿ ಕುಳಿತಿದ್ದರು.

ಹೀಗಾಗಿ ಮನೆಯಲ್ಲಿ ಇರುವಾಗ ಸೋನು ಕಣ್ಣೀರಿಗೆ ನವೀನ್ ಸೋಲದಿದ್ರು.. ಮನೆಯಿಂದ ಹೊರಹೋದ ಬಳಿಕ ನವೀನ್ ಸೋನು ಕಣ್ಣೀರಿಗೆ ಸೋಲ್ತಾರಾ ಅನ್ನೋ ಅನುಮಾನ ಶುರುವಾಗಿದೆ.

 

 

Leave a Reply

Your email address will not be published.