‘ನನಗೆ ಕನ್ನಡದ ಎಲ್ಲ ನಟರ ಜೊತೆಗೆ ಸಿನಿಮಾ ಮಾಡಲು ಇಷ್ಟ’ – ಪ್ರಿಯಾ ವಾರಿಯರ್

ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ನಟಿ ಪ್ರಿಯಾ ವಾರಿಯರ್ ಸ್ಯಾಂಡಲ್ ವುಡ್ ಫ್ಯಾನ್ಸ್ ಗೆ ಒಂದು ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ. ಕೂಲ್ ಸಿಟಿ ಕಂಡ ಪ್ರಿಯಾ, ಕನ್ನಡ ಸಿನಿಮಾರಂಗದ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಕನ್ನಡದ ಯಾವ ನಟರ ಜೊತೆಗೆ ಸಿನಿಮಾ ಮಾಡುವ ಆಸೆ ಇದೆ..? ಎಂಬ ಪ್ರಶ್ನೆಗೆ ಪ್ರಿಯಾ ಜಾಣ್ಮೆಯ ಉತ್ತರ ನೀಡಿದ್ದಾರೆ. ”ನನಗೆ ಎಲ್ಲ ನಟರ ಜೊತೆಗೆ ಸಿನಿಮಾ ಮಾಡಲು ಇಷ್ಟ. ಹೀಗಾಗಿ, ನಾನು ಒಬ್ಬ ನಟರ ಹೆಸರನ್ನು ತೆಗೆದುಕೊಂಡು, ಇನ್ನೊಬ್ಬ ನಟರ ಜೊತೆಗೆ ಬರುವ ಸಿನಿಮಾವನ್ನು ಕಳೆದುಕೊಳ್ಳಲು ಬಯಸುವುದಿಲ್ಲ” ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯದ ವರೆಗೆ ಯಾವುದೇ ಕನ್ನಡ ಚಿತ್ರಗಳ ಅವಕಾಶ ನನಗೆ ಬಂದಿಲ್ಲ, ಮುಂದೆ ಒಳ್ಳೆಯ ಅವಕಾಶ ಸಿಕ್ಕರೆ ಕನ್ನಡ ಚಿತ್ರರಂಗಕ್ಕೆ ಬರುತ್ತೇನೆ ಎಂದಿದ್ದಾರೆ ಪ್ರಿಯಾ.

ಪ್ರಿಯಾ ಇತ್ತೀಚಿಗಷ್ಟೆ ‘ಕೆಜಿಎಫ್’ ಸಿನಿಮಾವನ್ನು ನೋಡಿ ಬಹಳ ಮೆಚ್ಚಿಕೊಂಡಿದ್ದಾರೆ. ಪ್ರಿಯಾ ಮೊದಲ ಸಿನಿಮಾ ‘ಓರು ಅಡಾರ್ ಲವ್’ ಚಿತ್ರ ಕನ್ನಡಕ್ಕೆ ಡಬ್ ಆಗಿದ್ದು, ಫೆಬ್ರವರಿ 14 ರಂದು ಬಿಡುಗಡೆಯಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com