ನವದೆಹಲಿಯಲ್ಲಿ 70ನೇ ಗಣರಾಜ್ಯೋತ್ಸವದ ಸಂಭ್ರಮ : ವಿವಿಧ ಸ್ತಬ್ಧಚಿತ್ರದಲ್ಲಿ ಗಾಂಧೀಜಿಗೆ ಗೌರವ

ನವದೆಹಲಿಯಲ್ಲಿ 70ನೇ ಗಣರಾಜ್ಯೋತ್ಸವದ ಸಂಭ್ರಮ ಕಳೆಕಟ್ಟಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೂ ಪರೇಡ್ ನಂತರ ಕೆಂಪು ಕೋಟೆ ಆವರಣದಲ್ಲಿ ಕರ್ನಾಟಕದ ವಿವಿಧ ಸ್ತಬ್ಧಚಿತ್ರದಲ್ಲಿ ಗಾಂಧೀಜಿಗೆ ಗೌರವ ಸಲ್ಲಿಸಲಾಗಿದೆ. ಈ ಬಾರಿ ಗಾಂಧೀಜಿಯ ನೆನಪುಗಳು ಅನಾವರಣಗೊಂಡಿದ್ದು, ಹಿಂದೂ- ಮುಸ್ಲಿಂ ಏಕತೆ, ವಿದೇಶಿ ವಸ್ತುಗಳ ಭಹಿಷ್ಕಾರ, ಉದಯವಾಗಲಿ ನಮ್ಮ ಚಲುವ ಕನ್ನಡನಾಡು ಮೆರವಣಿಗೆ, ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರ ಅನಾವರಣ, ಇಂಧನ ಇಲಾಖೆ – ಸೌಲಭ್ಯ ಯೋಜನೆ ಟ್ಯಾಬ್ಲೋ ಪ್ರದರ್ಶನ ಮಾಡಲಾಯಿತು.

1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ 39ನೇ ಏಕೈಕ ಕಾಂಗ್ರೆಸ್ ಅಧಿವೇಶನ ಸ್ತಬ್ಧಚಿತ್ರ, ಅಧಿವೇಶನದಲ್ಲಿ ಗಾಧಿಜೀ ಭಾಷಣ ಮಾಡಿದ ವೇದಿಕೆ, ಪಶ್ಚಿಮ ಬಂಗಾಳ – ಮಹತ್ಮಾ ಗಾಂಧೀಜಿಯವರ ಸ್ತಬ್ಧಚಿತ್ರಗಳ ಪ್ರದರ್ಶನ ಮಾಡಲಾಯಿತು.

ಸ್ತಬ್ಧಚಿತ್ರಗಳ ಪ್ರದರ್ಶನ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೌಕಾಪಡೆ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮಗಳು ಆವರಣದಲ್ಲಿ ನಡೆಯುತ್ತಿದ್ದು,  ಪ್ರಧಾನಿ ನರೇಂದ್ರ ಮೋದಿ  ಅವರು ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com