ಒಂಟಿಯಾಗಿದ್ದರೆ ಸಂಗಾತಿಯನ್ನು ಹುಡುಕಿಕೊಳ್ಳಲು ಕಂಪನಿಯೇ 8 ದಿನ ರಜೆ ನೀಡುತ್ತೆ..!

ಚೀನಾದ ಎರಡು ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸಂಗಾತಿಯನ್ನು ಹುಡುಕಿಕೊಳ್ಳುವುದಕ್ಕೆ ರಜೆ ನೀಡುತ್ತದೆಯಂತೆ. ನಂಬಲು ಸಾಧ್ಯವಾಗದೇ ಇದ್ದರೂ ಇದು ಸತ್ಯ.

ಹೌದು.. ಒಂದೆರೆಡು ದಿನ ರಜೆ ಪಡೆಯಬೇಕು ಅಂದರೆ ಹರಸಾಹಸಪಡಬೇಕಾಗಿದ್ದ ಈ ಕಾಲದಲ್ಲಿ ಚೀನಾದ ಹಂಗಜೌ ಸೊಂಗ್ಚೆಂಗ್ ಪರ್ಫಾರ್ಮೆನ್ಸ್ ಮತ್ತು ಹಂಗಜೌ ಸಾಂಗ್ಚೆಂಡ್ ಟೂರಿಸಂ ಮ್ಯಾನೇಜ್ಮೆಂಟ್ ಎಂಬ ಎರಡು ಕಂಪನಿಗಳು ಪ್ರೇಮಿಗಳಿಲ್ಲದ ಮಹಿಳಾ ಉದ್ಯೋಗಿಗಳಿಗೆ ಎಂಟು ದಿನಗಳ ಕಾಲ ರಜೆ ನೀಡಿ, ಸಂಗಾತಿಗಳನ್ನು ಹುಡುಕಿಕೊಳ್ಳಲು ಹೇಳುತ್ತದೆಯಂತೆ.

ಹೀಗೆ ರಜೆ ಪಡೆಯುವುದಕ್ಕೆ ಮಹಿಳೆಯರಿಗೆವಯಸ್ಸಿನ ಮಿತಿ ಇದೆ. 30 ವರ್ಷ ವಯಸ್ಸಾದರೂ ಸಂಗಾತಿಗಳಿಲ್ಲದೆ ಖಿನ್ನತೆ ಅನುಭವಿಸುತ್ತಿರುವ, ಒಂಟಿನತದಿಂದ ಬಳಲುತ್ತಿರುವ ಮಹಿಳೆಯರಿಗೆ ಈ ರಜೆಯ ಸೌಲಭ್ಯ ಸಿಗಗುತ್ತದೆ.

ಹಂಗಜೌನ ಜಿಜಿಯಾಂಜ್ ನಲ್ಲಿರುವ ಹೈಸ್ಕೂಲ್ ವೊಂದರಲ್ಲಿಯೂ ಒಂಟಿಯಾಗಿರುವ ಶಿಕ್ಷಕರಿಗೆ ಪ್ರತಿ ತಿಂಗಳು ಎರಡು ದಿನ ಹೆಚ್ಚುವರಿ ರಜೆ ನೀಡುವ ಪರಿಪಾಠವನ್ನೂ ರೂಢಿಸಿಕೊಂಡು ಬರಲಾಗಿದೆಯಂತೆ..

 

Leave a Reply

Your email address will not be published.

Social Media Auto Publish Powered By : XYZScripts.com