ಫೇಸ್‍ಬುಕ್‍ನಲ್ಲಾದ ಒಂದು ಎಡವಟ್ಟೇ ಕೊಲೆಗೆ ಸಾಕ್ಷಿ – ಹೊಡೆದು ಸಾಯಿಸಿದ್ದು ಸಾಬೀತು

ಫೇಸ್‍ಬುಕ್ ಮೂಲಕ ವಂಚನೆ, ಮೋಸ, ಅವಹೇಳನ… ಇಂಥ ಅನೇಕ ಸುದ್ದಿಗಳನ್ನು ಕೇಳಿರುತ್ತೇವೆ. ಹೀಗೆ ಸಾಕಷ್ಟು ಕೆಟ್ಟ ಸುದ್ದಿಯನ್ನು ಕೇಳಿರುವ ಫೇಸ್‍ಬುಕ್‍ಗೂ ಈಗ ಒಂದೊಳ್ಳೆಯ ಮಾತು ಕೇಳುವಂತಾಗಿದೆ. ಏಕೆಂದರೆ ಇಲ್ಲಿ ನಡೆದ ಕೊಲೆಯೊಂದಕ್ಕೆ ಫೇಸ್‍ಬುಕ್ಕೇ ಸಾಕ್ಷಿ ಹೇಳಿ, ಕೊಲೆಗಾರನನ್ನು ಜೈಲಿಗೆ ಹೋಗುವಂತೆ ಮಾಡಿದೆ.

ಅಮೆರಿಕದ ಬ್ಯಾಂಡ್ ಒಂದರ ಸಂಗೀತಗಾರ ಜಸೊನ್ ಮೂಡಿ ಎಂಬಾತನನ್ನು ಥಳಿಸಿ ಹತ್ಯೆ ಮಾಡಿದ ಡೊನಾಲ್ಡ್ ಗಲೆಕ್ ಈಗ ಫೇಸ್‍ಬುಕ್‍ನಿಂದಾಗಿ ಸಾಕ್ಷಿಸಮೇತ ಸಿಕ್ಕಿಬಿದ್ದಿದ್ದಾನೆ. ನವೆಂಬರ್‍ನಲ್ಲಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಅಮೆರಿಕದ ಮೈನ್ ಬಂಗೊರ್‍ನಲ್ಲಿ ಬಿದ್ದಿದ್ದ ಜಸೊನ್‍ಅನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಎರಡೇ ದಿನದಲ್ಲಿ ಸತ್ತಿದ್ದಾನೆ. ಹೊಡೆತದಿಂದ ಸತ್ತಿದ್ದು ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾದರೂ ಕೊಲೆಗಾರನ ಸುಳಿವು ಸಿಕ್ಕಿರಲಿಲ್ಲ.

ಆದರೆ ಜಸೂನ್‍ಗೆ ಡೊನಾಲ್ಡ್ ಹೊಡೆಯುವಾಗ ಅವನಿಗೆ ಗೊತ್ತಿಲ್ಲದಂತೆ ಕಿಸೆಯಲ್ಲಿದ್ದ ಮೊಬೈಲ್ ಫೋನ್‍ನಲ್ಲಿ ಫೇಸ್‍ಬುಕ್ ವೀಡಿಯೊ ಕಾಲ್ ಆನ್ ಆಗಿ ಆತನ ಗೆಳತಿಗೆ ಕನೆಕ್ಟ್ ಆಗಿತ್ತು. ಆಕೆ ಪೊಲೀಸರಿಗೆ ತಿಳಿಸಿ ಸಾಕ್ಷಿ ಹೇಳಿದ್ದರಿಂದ ಕೊಲೆ ಪ್ರಕರಣ ಬಯಲಾಗಿ ಆರೋಪಿ ಬಂಧನಕ್ಕೀಡಾಗಿದ್ದಾನೆ.ುಕ್ ವೀಡಿಯೊ ಕಾಲ್ ಹೋಗಿತ್ತು. ಆಕೆ ಸಾಕ್ಷಿ ಹೇಳಿದ್ದರಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ.

Leave a Reply

Your email address will not be published.