ಡ್ರಗ್ಸ್ ಜಾಲದ ಹಿಂದೆ ಪಾಕಿಗಳ ಕೈವಾಡ – ದೆಹಲಿ ಪೋಲೀಸರಿಂದ ಐವರ ಬಂಧನ

ನವದೆಹಲಿ: ಡ್ರಗ್ಸ್ ಜಾಲದ ಹಿಂದೆ ಪಾಕಿಸ್ತಾನ ಮೂಲದ ವ್ಯಕ್ತಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಬುಧವಾರವಷ್ಟೇ 90 ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ ಡ್ರಗ್ಸ್ ಗಳನ್ನು ದೆಹಲಿ ವಿಶೇಷ ಪೊಲೀಸ್ ತಂಡ ವಶಪಡಿಸಿಕೊಂಡಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಥಾಣೆ ಹಾಗೂ ದೆಹಲಿ ಮೂಲದ ಐವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 13.5 ಲಕ್ಷ ರು ಮೌಲ್ಯದ ಮಾತ್ರೆಗಳು, 10.2 ಕೆಜಿ ಟ್ರಾಮಡಾಲ್ ಪೌಡರ್ ಮತ್ತು 500 ಗ್ರಾಂ ನ ಕೆಟಾಮೈನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಇವರು ಈ ನಿಷೇಧಿತ ವಸ್ತುಗಳನ್ನು ಮುಂಬೈ ಮತ್ತು ದೆಹಲಿಯಿಂದ ಸಂಗ್ರಹಿಸುತ್ತಿದ್ದು, ಅಲ್ಲಿಂದ ನೇಪಾಳ ಮಲೇಷ್ಯಾ ಹಾಗೂ ಲಂಡನ್ ಗಳಿಗೆ ರವಾನಿಸುತ್ತಿದ್ದರು. ದಂಧೆಯ ಕಿಂಗ್ ಪಿನ್ ಪಾಕಿಸ್ತಾನ ಮೂಲದ ಮುಸಾಹರ್ ಮತ್ತು ಅಮರ್ ಜಿತ್ ಬೈನ್ಸ್ ಎಂಬುವರು ಎಂದು ತಿಳಿದು ಬಂದಿದ್ದು, ಇವರು ಲಂಡನ್‌ನಲ್ಲಿ ವಾಸ್ತವವಾಗಿದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ. ಇನ್ನೊಬ್ಬ ಕಿಂಗ್ ಪಿನ್ ನೇಪಾಳದಲ್ಲಿದ್ದ ಜಸ್ಪ್ರೀತ್ ಸಿಂಗ್ ದಿಲ್ಲಾನ ಎಂದು ಗೊತ್ತಾಗಿದೆ. ಸತೀಶ್ ಸಾಹು, ಸುನೀಲ್ ಕುಮಾರ್, ಲೋಕೇಶ್ ಮೆಹತಾ, ನೀರಜ್ ಅರೋರಾ, ರಾಜೇಶ್ ದುತ್ತಾ ಎಂಬುವರು ಬಂಧಿತರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com