ಪಾಕಿಸ್ತಾನದಲ್ಲಿ ಬಜರಂಗಿ “ಭಾಯಿ ಜಾನ್” : ಕರಾಚಿಯಲ್ಲಿ ಸಲ್ಮಾನ್ ತದ್ರೂಪಿ ಪತ್ತೆ..!

ಕರಾಚಿ: ಮಗುವೊಂದನ್ನು ತನ್ನ ಮನೆಗೆ ತಲುಪಿಸಲು ಪಾಕಿಸ್ತಾನ ಗಡಿದಾಟಿ ಭಜರಂಗಿ ಭಾಯಿಜಾನ್ ನಟ ಸಲ್ಮಾನ್ ಖಾನ್ ಸಹೋದರನೊಬ್ಬ(ಭಾಯಿ) ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ತದ್ರೂಪಿ ಒಬ್ಬರು ಪಾಕಿಸ್ತಾನದಲ್ಲಿ ಕಂಡುಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರಾಚಿ ಬಳಿಯ ಬೋಲ್ಟನ್ ಮಾರ್ಕೆಟ್ ನಲ್ಲಿ ಈ ವಿಡಿಯೋ ಮುದ್ರಿತವಾಗಿದೆ.

ನೋಡಿದಷ್ಟು ಸಮಯ ಸಲ್ಮಾನ್ ಖಾನ್ ರೀತಿಯಲ್ಲೇ ಭಾಸವಾಗುವ ಒಂಚೂರು ವ್ಯತ್ಯಾಸವಿಲ್ಲದ ವ್ಯಕ್ತಿ ಪಾಕಿಸ್ತಾನದಲ್ಲಿ ಇದ್ದಾರೆ ಎನ್ನುವುದು ಸುದ್ದಿಯಾಗಿದೆ.
ವಿಡಿಯೋ ಈಗ ವೈರಲ್ ಆಗಿದ್ದು ಅನೇಕರ ಹುಬ್ಬೇರಿಸಿದೆ. ಮಾರ್ಕೆಟ್ ನಲ್ಲಿ ಸಲ್ಮಾನ್ ರೀತಿಯಲ್ಲೆ ಪೂರ್ಣ ತೋಳಿನ ಟೀ ಷರ್ಟ್ ಹಾಗೂ ಸನ್ ಗ್ಲಾಸ್ ಧರಿಸಿರುವ ವ್ಯಕ್ತಿ ರಸ್ತೆ ಬದಿ ಪಾರ್ಕಿಂಗ್ ಮಾಡಿರುವ ದ್ವಿಚಕ್ರ ವಾಹನಗಳನ್ನು ಸರಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸುವ ಅನೇಕರು ಸಲ್ಮಾನ್ ಖಾನ್ ಗೂ ಇದನ್ನು ಟ್ಯಾಗ್ ಮಾಡಿದ್ದಾರೆ. ಆದರೆ ಭಾರತ್ ಇನ್ ಮುಂಬೈ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com